ಅಪಾಯಕಾರಿ ಮೊಬೈಲ್ ಆಟಗಳಿಂದ ಮಕ್ಕಳನ್ನು ದೂರವಿರಿಸಿ

Update: 2017-08-08 18:38 GMT

ಮಾನ್ಯರೆ,

ಇತ್ತೀಚೆಗೆ ಮುಂಬೈನ ನಾಲ್ಕನೆ ತರಗತಿಯ ವಿದ್ಯಾರ್ಥಿ ಮನ್ ಪ್ರೀತಮ್ ಸಿಂಗ್ ಕಟ್ಟಡವೊಂದರ ಏಳನೆ ಮಹಡಿಯಿಂದ ಜಿಗಿದು ಜೀವ ಬಿಟ್ಟಿದ್ದಾನೆ. ಈತನ ‘ಆತ್ಮಹತ್ಯೆ’ಗೆ ಕಾರಣ ಬ್ಲೂ ವೇಲ್ (ನೀಲಿ ತಿಮಿಂಗಿಲ) ಹೆಸರಿನ ಆತ್ಮಹತ್ಯೆಗೆ ಪ್ರಚೋದಿಸುವ ಅಪಾಯಕಾರಿ ಮತ್ತು ಭಯಾನಕ ಆನ್ ಲೈನ್ ಆಟ. ಈ ಆಟದ ಚಟಕ್ಕೆ ಬಲಿಯಾಗಿ ಆತ ಎಳವೆಯಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ರಶ್ಯ, ಬ್ರಿಟನ್, ಚೀನಾ, ಬ್ರೆಝಿಲ್, ಇಟಲಿ, ಚಿಲಿ, ಕೊಲಂಬಿಯಾ ಮತ್ತು ಪೋರ್ಚುಗಲ್ ದೇಶದಲ್ಲಿ ಪ್ರಚಲಿತವಿರುವ ಈ ಅಪಾಯಕಾರಿ ಆಟ, ಇದುವರೆಗೆ 150ಕ್ಕೂ ಅಧಿಕ ಮಕ್ಕಳನ್ನು ಬಲಿ ಪಡೆದುಕೊಂಡಿದೆ. ಭಾರತದಲ್ಲಿ ಈಗ ಈ ಆಟಕ್ಕೆ ಮೊದಲ ಜೀವ ತೆತ್ತಿದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣ ಹಾನಿ ಮಾಡುವ ಭಯಾನಕ ಗೇಮ್‌ಗಳು ಜಾರಿಯಲ್ಲಿವೆ.ಉಚಿತವಾಗಿ ನೀಡಿ ಮಕ್ಕಳನ್ನು ಆಕರ್ಷಣೆ ಮತ್ತು ಕುತೂಹಲ ಮೂಡಿಸಿ ಈ ಆಟಗಳಿಗೆ ಅಂಟಿಕೊಳ್ಳುವಂತೆ ಮಾಡುತ್ತವೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಮಕ್ಕಳಿಗೆ ದಿನವಿಡೀ ಮೊಬೈಲ್ ಫೋನ್ ಕೊಟ್ಟು, ಅದರಲ್ಲಿ ಯೂಟ್ಯೂಬ್, ಟ್ವಿಟರ್, ವಾಟ್ಸ್ ಆ್ಯಪ್, ಫೇಸ್ ಬುಕ್ ಮತ್ತು ಗೇಮ್‌ಗಳಲ್ಲಿ ಸಮಯ ವ್ಯರ್ಥ ಮಾಡುವುದನ್ನು ಗಮನಿಸಿಯೂ ಸುಮ್ಮನಿರುವವರಿಗೆ ಈ ‘ಆತ್ಮಹತ್ಯೆ’ಯೊಂದು ಪಾಠವಾಗಿದೆ. ಮಕ್ಕಳು ಮೊಬೈಲ್‌ಗೆ ದಾಸರಾಗಲು ಬಿಡದೆ ಕಡಿವಾಣ ಹಾಕಬೇಕು. ಆಗ ಮಾತ್ರ ಮಕ್ಕಳು ಇಂತಹ ಅನಾಹುತದಿಂದ ಜೀವ ಕಳೆಯುವುದನ್ನು ತಪ್ಪಿಸಬಹುದಾಗಿದೆ. ಸರಕಾರ ಕೂಡಾ ಇಂತಹ ಆತ್ಮಹತ್ಯೆಗೆ ಪ್ರಚೋದಿಸುವಂತಹ ಅಪಾಯಕಾರಿ ಆಟಗಳನ್ನು ಕೂಡಲೇ ನಿಷೇಧಿಸಬೇಕು.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News