ಮಂಗಳೂರಿನ ಹಜ್ ಯಾತ್ರಾರ್ಥಿ ಮಕ್ಕಾದಲ್ಲಿ ನಿಧನ

Update: 2017-08-09 08:19 GMT

ಸೌದಿ ಅರೇಬಿಯಾ, ಆ. 8: ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಮಂಗಳೂರಿನಿಂದ ಹೋಗಿದ್ದ ವ್ಯಕ್ತಿಯೊಬ್ಬರು ಮಕ್ಕಾದ ಅರಾಫತ್ ಆಸ್ಪತ್ರೆಯಲ್ಲಿ ನಿಧನರಾದ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಮಂಗಳೂರಿನ ಬಂದರ್ ನಿವಾಸಿ ಅಬ್ದುಲ್ಲಾ ಎಂದು ಗುರುತಿಸಲಾಗಿದೆ.

ಉಸಿರಾಟದ ತೊಂದರೆಯಿಂದ ಬಳಲಿದ್ದ ಅವರನ್ನು ಸೋಮವಾರ ಮಕ್ಕಾದ ಅರಾಫತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು. ಮೃತ ಅಬ್ದುಲ್ಲಾ ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ಹಜ್ಜ್ ನಿರ್ವಹಿಸಲು ಜು.24ರಂದು ಆಗಮಿಸಿದ್ದರು.

ನಿಧನದ ಸುದ್ದಿ ತಿಳಿದು ಕಾರ್ಯಪ್ರವೃತರಾದ ಕರ್ನಾಟಕದ ಸಾಮಾಜಿಕ ಸಂಘಟನೆಗಳಾದ ಇಂಡಿಯಾ ಫ್ರಟೆರ್ನಿಟಿ ಫೋರಮ್ ಮತ್ತು ಕರ್ನಾಟಕ ಕಲ್ಚರಲ್ ಫೌಂಡೇಶನ್ ಮಕ್ಕಾ ವಲಯದ ಕಾರ್ಯಕರ್ತರು ಆಸ್ಪತ್ರೆಗೆ ಧಾವಿಸಿ ಮೃತರ ಅಂತಿಮ ಕ್ರಿಯೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿ ನಂತರ ಮಸ್ಜಿದುಲ್ ಹರಮ್ ನಲ್ಲಿ ಮೃತರ ಜನಾಝ ನಮಾಝ್ ನಿರ್ವಹಿಸಿ ನಂತರ ಪವಿತ್ರ ಹರಮ್ ನ ಸಮೀಪದ ಷರಾಯ ಖಬರ್ ಸ್ಥಾನದಲ್ಲಿ ದಫನ ಮಾಡಲಾಯಿತು.

ದಫನ ಕ್ರಿಯೆಗೆ ಇಂಡಿಯಾ ಫ್ರಟೆರ್ನಿಟಿ ಫೋರಮ್ ಸದಸ್ಯರಾದ ಉಬೈದುಲ್ಲಾ ಬಂಟ್ವಾಳ್, ಶರೀಫ್ ಸುರತ್ಕಲ್, ಇಸ್ಮಾಯಿಲ್ ಬಂಟ್ವಾಳ್, ಹಮೀದ್ ಫಜೀರ್ ಮತ್ತು ಕರ್ನಾಟಕ ಕಲ್ಚರಲ್ ಫೌಂಡೇಶನ್ ನ ಹನೀಫ್ ಸಖಾಫಿ ಬೊಲ್ಮರ್, ಮುಸ್ತಾಕ್ ಸಾಗರ್, ಬಶೀರ್ ಮದನಿ ಹಾಗು ಇರ್ಷಾದ್ ಉಚ್ಚಿಲ್ ನೆರವಾದರು.

Writer - ವರದಿ: ಹಕೀಂ ಬೋಳಾರ್

contributor

Editor - ವರದಿ: ಹಕೀಂ ಬೋಳಾರ್

contributor

Similar News