ಜೈಲಿನಲ್ಲಿರುವ ತಂದೆಯ ನೋಡಲು ಬಂದ ಮಕ್ಕಳ ಮುಖಕ್ಕೆ ಸೀಲ್ ಒತ್ತಿದರು..!

Update: 2017-08-09 13:22 GMT

ಹೊಸದಿಲ್ಲಿ,ಆ.9 : ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣವೊಂದರಲ್ಲಿ ಭೋಪಾಲ್ ಸೆಂಟ್ರಲ್ ಜೈಲಿನಲ್ಲಿರುವ ತಮ್ಮ ತಂದೆಯನ್ನು ನೋಡಲು ತಮ್ಮ ತಾಯಿಯೊಂದಿಗೆ ಬಂದಿದ್ದ ಮಕ್ಕಳಿಬ್ಬರ ಮುಖಕ್ಕೇ ಪ್ರವೇಶಾತಿ ಸೀಲ್ ಅನ್ನು ಜೈಲಿನ ಅಧಿಕಾರಿಗಳು ಹಾಕಿದ್ದಾರೆ.

ಜೈಲಿನಲ್ಲಿ ಹಲವು ಮಹಿಳಾ ಕೈದಿಗಳ ಮಕ್ಕಳಿರುವುದರಿಂದ ಅವರೊಡನಿರುವಾಗ ಈ ಇಬ್ಬರು ಮಕ್ಕಳನ್ನು ಸುಲಭವಾಗಿ ಗುರುತಿಸಲು ಈ ರೀತಿ ಮಾಡಲಾಗಿದೆಯೆಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಮತ್ತೊಮ್ಮೆ ಈ ಮಕ್ಕಳು ಜೈಲಿಗೆ ಬರದಂತೆ ತಡೆಯುವುದೇ ಈ ಕ್ರಮದ ಇನ್ನೊಂದು ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯ ಪ್ರದೇಶದ ಮಾನವ ಹಕ್ಕುಗಳ ಆಯೋಗವು ಈ ಬಗ್ಗೆ ಬಂದೀಖಾನೆ ಇಲಾಖೆಯ ಮಹಾ ನಿರ್ದೇಶಕರಿಂದ  ವರದಿ ಕೇಳಿದೆ.

ತನಿಖೆ ನಡೆಸಿ  ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಧ್ಯ ಪ್ರದೇಶದ ಬಂದೀಖಾನೆ ಸಚಿವ  ಕುಸುಮ್ ಮೆಹ್ದಲೆ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News