ಪೋಲ್‌ವಾಲ್ಟ್: ಕೆಂಡ್ರಿಕ್ಸ್‌ಗೆ ಚಿನ್ನ

Update: 2017-08-09 18:50 GMT

ಲಂಡನ್, ಆ.9: ಅಮೆರಿಕದ ಸ್ಯಾಮ್ ಕೆಂಡ್ರಿಕ್ಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳವಾರ ಪೋಲ್ ವಾಲ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮೊದಲ ಸ್ಥಾನ ಗಿಟ್ಟಿಸಿಕೊಂಡರು. ಈ ವರ್ಷ ಅಜೇಯ ದಾಖಲೆ ಕಾಯ್ದುಕೊಂಡಿರುವ ಕೆಂಡ್ರಿಕ್ಸ್ 5.95 ಮೀ. ಎತ್ತರಕ್ಕೆ ಜಿಗಿದು ಮೊದಲ ಸ್ಥಾನ ಪಡೆದರು. ಪೊಲೆಂಡ್‌ನ ಪಿಯೊಟ್ ಲಿಸೆಕ್(5.89 ಮೀ.) ಬೆಳ್ಳಿ ಹಾಗೂ ಫ್ರಾನ್ಸ್‌ನ ಲಾವಿಲೆನ್ನಿ(5.89 ಮೀ.) ಕಂಚು ಜಯಿಸಿದರು.

ಕೆಂಡ್ರಿಕ್ಸ್ 10 ವರ್ಷಗಳ ಬಳಿಕ ಅಮೆರಿಕ ತಂಡಕ್ಕೆ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಪೋಲ್‌ವಾಲ್ಟ್‌ನಲ್ಲಿ ಚಿನ್ನ ಗೆದ್ದುಕೊಟ್ಟಿದ್ದಾರೆ. 2007ರಲ್ಲಿ ಬ್ರಾಡ್ ವಾಲ್ಕರ್ ಈ ಸಾಧನೆ ಮಾಡಿದ್ದರು. ಕೆಂಡ್ರಿಕ್ಸ್ ಜೂನ್‌ನಲ್ಲಿ ನಡೆದಿದ್ದ ಯುಎಸ್ ಟ್ರಾಕ್ ಹಾಗೂ ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಜೀವನಶ್ರೇಷ್ಠ 6.00 ಮೀ. ಎತ್ತರಕ್ಕೆ ಜಿಗಿಯುವ ಮೂಲಕ ಚಿನ್ನದ ಪದಕ ಜಯಿಸಿದ್ದರು.

ಹಾಲಿ ಚಾಂಪಿಯನ್ ಕೆನಡಾದ ಶಾನ್ ಬಾರ್ಬರ್ 5.65 ಮೀ. ಎತ್ತರವನ್ನು ಮೀರಿಸಲು ವಿಫಲವಾದರು. 4 ವರ್ಷಗಳ ಹಿಂದೆ ಮಾಸ್ಕೋದಲ್ಲಿ ಪದಕ ಜಯಿಸಿದ್ದ ಜರ್ಮನಿಯ ರಫೆಲ್ ಹಾಲ್ಡೆಪ್ ಮೊದಲ ಸುತ್ತಿನಲ್ಲೇ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News