ಅಮೇಠಿಯ ರೈಲಿನೊಳಗೆ ಆತಂಕ ಸೃಷ್ಟಿಸಿದ ಸ್ಫೋಟಕ

Update: 2017-08-10 05:20 GMT

ಹೊಸದಿಲ್ಲಿ, ಆ.10: ಕಡಿಮೆ ತೀವ್ರತೆಯ ಸ್ಫೋಟಕವೊಂದು ಅಮೇಠಿಯ ಅಕಾಲ್ ತಖ್ತ್ ಎಕ್ಸ್ ಪ್ರೆಸ್ ನಲ್ಲಿ ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ತಕ್ಷಣವೇ ರೈಲಿನ ಎರಡು ಬೋಗಿಗಳನ್ನು ಖಾಲಿ ಮಾಡಿ ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಯಿಸಿದ್ದು, ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.

“ಕಡಿಮೆ ತೀವ್ರತೆಯ ಬಾಂಬ್ ಪತ್ತೆಯಾಗಿತ್ತು. ಅದನ್ನು ತಕ್ಷಣವೇ ನಿಷ್ಕ್ರಿಯಗೊಳಿಸಿ ತೆರವುಗೊಳಿಸಲಾಗಿದ್ದು, ರೈಲು ಹೊರಟಿದೆ” ಎಂದು ಸರಕಾರಿ ರೈಲ್ವೆ ಪೊಲೀಸ್ ಎಸ್ಪಿ ಸುಮಿತ್ರಾ ಯಾದವ್ ಹೇಳಿದ್ದಾರೆ.

ಸ್ಫೋಟಕ ಇದ್ದ ಜಾಗದಲ್ಲೇ ಪತ್ರವೊಂದು ಪತ್ತೆಯಾಗಿದೆ. “ಅಬು ದುಜಾನನ ಸಾವಿಗೆ ಭಾರತ ಬೆಲೆ ತೆರಬೇಕಾಗುತ್ತದೆ” ಎಂದು ಪತ್ರದಲ್ಲಿ ಬರೆಯಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News