×
Ad

ಶಾಸಕರ ಹೆಸರಿನಲ್ಲಿ ವಂಚನೆ: ಆರೋಪ

Update: 2017-08-11 19:12 IST

ಬೆಂಗಳೂರು, ಆ.11: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಝಮೀರ್ ಅಹ್ಮದ್ ಖಾನ್ ಹೆಸರು ಹೇಳಿಕೊಂಡು, ಹೆಚ್ಚು ಬಡ್ಡಿ ನೀಡಿವುದಾಗಿ ಹೇಳಿ ಮಹಿಳೆಯೊಬ್ಬರು ಹಲವಾರು ಮಂದಿಗೆ ವಂಚಿಸಿದ ಪ್ರಕರಣ ಇಲ್ಲಿನ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಾಸಕ ಝಮೀರ್ ಅಹ್ಮದ್‌ಖಾನ್ ಅವರು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಅದರಲ್ಲಿ ಹಣ ಹೂಡಿದರೆ ಒಂದೇ ತಿಂಗಳಲ್ಲಿ ಹಣ ಎರಡರಷ್ಟಾಗುತ್ತದೆ ಎಂದು ಹೇಳಿ ಸಮ್ರೀನ್ ಎಂಬಾಕೆ ಹಣ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಆದರೆ, ಕಳೆದ ಮೂರು ತಿಂಗಳಿನಿಂದ ಮಹಿಳೆ ನಾಪತ್ತೆಯಾಗಿದ್ದು, ಇದೀಗ ಹಣ ನೀಡಿದವರಿಗೆ ತಾವು ಮೋಸ ಹೋಗಿರುವ ಬಗ್ಗೆ ತಿಳಿದುಬಂದಿದೆ. ಬಳಿಕ ಸದ್ದುಗುಂಟೆ ಪಾಳ್ಯ ಠಾಣೆ ಪೊಲೀಸರಿಗ ದೂರು ನೀಡಿದ್ದು, ಓರ್ವ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News