ಹೈಕೋರ್ಟ್‌ಗೆ ಸ್ಪಷ್ಟಪಡಿಸಿದ ನೈರುತ್ಯ ರೈಲ್ವೆ ಇಲಾಖೆ
ಬೆಂಗಳೂರು, ಆ.11: ಬೆಂಗಳೂರು-ಕಾರವಾರ ನಡುವೆ ಪ್ರತಿನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು ಹೊಸದಾಗಿ ನಿರ್ಮಾಣಗೊಂಡಿರುವ ಕುಣಿಗಲ್ ರೈಲು ಮಾರ್ಗಕ್ಕೆ ಬದಲಿಸಲು ಸಾಧ್ಯವಿಲ್ಲ ಎಂದು ನೈರುತ್ಯ ರೈಲ್ವೇ ಇಲಾಖೆ ರಾಜ್ಯ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಬೆಂಗಳೂರು-ಕಾರವಾರ ನಡುವೆ ಪ್ರತಿನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು ಹೊಸದಾಗಿ ನಿರ್ಮಾಣಗೊಂಡಿರುವ ಕುಣಿಗಲ್ ರೈಲು ಮಾರ್ಗಕ್ಕೆ ಬದಲಿಸಲು ನೈರುತ್ಯ ರೈಲು ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಸಂಜಯ್ ರೇವಂಕರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿ ಹೀಗೆ ಸ್ಪಷ್ಟಪಡಿಸಲಾಯಿತು.
ಅರ್ಜಿದಾರರ ಪರ ವಾದಿಸಿದ ವಕೀಲ ರವೀಂದ್ರ ಜಿ.ಕೊಳ್ಳೆ ಅವರು, ಕುಣಿಗಲ್ ಮಾರ್ಗದ ಮೂಲಕ ಕಾರವಾರಕ್ಕೆ ರೈಲು ಸೇವೆ ಆರಂಭಿಸಿದರೆ ಬೆಂಗಳೂರಿನಿಂದ ಕಾರವಾರ ತಲುಪಲು ಸಮಯ 4 ತಾಸು ಕಡಿತವಾಗಲಿದೆ. ಹೀಗಾಗಿ, ಗುಣಿಗಲ್ ಮಾರ್ಗದ ಮೂಲಕ ಕಾರವಾರಕ್ಕೆ ರೈಲು ಸೇವೆ ಆರಂಭಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬೆಂಗಳೂರು-ಕಾರವಾರ ನಡುವೆ ್ರತಿನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು ಕುಣಿಗಲ್ ಮಾರ್ಗಕ್ಕೆ ಬದಲಿಸುವ ಸಾಧ್ಯತೆಯನ್ನು ಮತ್ತೊಮ್ಮ ಪರಿಶೀಲನೆ ನಡೆಸಿ ಮುಂದಿನ ವಿಚಾರಣೆ ವೇಳೆ ನಿಲುವು ತಿಳಿಸುವಂತೆ ರೈಲ್ವೇ ಇಲಾಖೆ ಪರ ವಕೀಲರಿಗೆ ಸೂಚಿಸಿ ಎರಡು ವಾರ ವಿಚಾರಣೆ ಮುಂದೂಡಿತು.