ಮಲಬಾರಿನ ಮಹಿಳೆಯರ ಗೌರವ

Update: 2017-08-12 13:14 GMT

ಮಲಬಾರಿನ ಕೆಲವು ಮಹಿಳೆಯರು ತಮ್ಮ ಎದೆಯ

ಮೇಲುಡುಗೆಯನ್ನು ಧರಿಸದೇ ಇರುವುದು

ನನಗೆ ನೋವನ್ನುಂಟು ಮಾಡಿದೆ.

ಅಂತಹ ದೃಶ್ಯಗಳು ಸೌಂದರ್ಯ ಪ್ರಜ್ಞೆ, ಅಭಿರುಚಿ ಮತ್ತು
ನೈತಿಕತೆಗೆ ಧಕ್ಕೆಯನ್ನುಂಟು ಮಾಡುತ್ತವೆ. ನೀವು ವಿವರಿಸಿದಂತೆ
ಬುಡಕಟ್ಟಿನ ಮಹಿಳೆಯರು ಹಾಗೆ ಮಾಡುವುದಕ್ಕೆ ಅವರ
ಸಂಪ್ರದಾಯಗಳೇ ಕಾರಣವಿರಬಹುದು.
ಆದರೂ ಒಮ್ಮೆ ಪರೀಕ್ಷಿಸಿ. ಅದು ಪರಂಪರಾನುಗತವಾಗಿ ಬಂದ
ಸಂಪ್ರದಾಯವೋ ಅಥವಾ ಬಡತನದಿಂದ ಅವರು ಮೇಲುಡುಗೆಯನ್ನು

ಅದು ಬಡತನವೇ ಆಗಿದ್ದರೆ ಅದರ ನಿವಾರಣೆಗೆ ಅಗತ್ಯವಾದ ಕ್ರಮ ಕೈಗೊಳ್ಳುತ್ತೇನೆ.
ಹಾಗೇನಾದರೂ ಸಂಪ್ರದಾಯವಾಗಿದ್ದರೆ ಅವರ ಬುಡಕಟ್ಟಿನ
ಹಿರೀಕರನ್ನು ಒಪ್ಪಿಸಿ ಅದನ್ನು ಕೈಬಿಡುವಂತೆ ಮಾಡೋಣ. ಹೀಗೆ
ಮಾಡುವಾಗ ಯಾವ ಕಾರಣಕ್ಕೂ ಅವರ ಧಾರ್ಮಿಕ ಸಂವೇದನೆಗಳಿಗೆ

ಊನವಾಗದಂತೆ ನೋಡಿಕೊಳ್ಳಬೇಕು. ಆ ಸಂಪ್ರದಾಯದ ಮೂಲ ಎಲ್ಲಿಯದೆಂದು ತಿಳಿಯಬೇಕು.
ಇದು ಮಹಿಳೆಯರಿಗೆ ಮಾತ್ರವೇ ಅಥವಾ ಪುರುಷರಿಗೂ ಈ ಮೇಲುಡುಗೆಯ
ನಿರ್ಬಂಧ ಇದೆಯೇ ಎಂಬುದನ್ನು ಪರೀಕ್ಷಿಸಬೇಕು. ಕೇವಲ ಮಹಿಳೆಯರಿಗೆ
ಆಗಿದ್ದ ಪಕ್ಷದಲ್ಲಿ ಅದು ನ್ಯಾಯ ಸಮ್ಮತವಾದುದಲ್ಲ.
ಬಡತನದಿಂದ, ರಾಜ ವಿಧಿಸಿದ ಶಿಕ್ಷೆಯಿಂದೇನಾದರೂ
ಹೀಗಾಗಿದ್ದಲ್ಲಿ ನಮ್ಮ ಸಾಮ್ರಾಜ್ಯವೇ ಮಧ್ಯಪ್ರವೇಶಿಸುತ್ತದೆ.
ಬಡತನ ಮತ್ತು ಸಂಪ್ರದಾಯವಲ್ಲದೆ ಪರಂಪರೆ ಯಾ ಬಡತನದಿಂದಾಗಿದ್ದರೆ,
ಅದು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಎಂತಹ
ಅವಮಾನಿತ, ಹಾಸ್ಯಾಸ್ಪದ ಭಾವನೆ ಉಂಟು ಮಾಡುತ್ತದೆ ಎಂಬುದನ್ನು
ಬುಡಕಟ್ಟಿನ ಹಿರೀಕರಿಗೆ ತಿಳಿಸಿ ಹೇಳಬೇಕು.

Writer - ಡಾ॥ಲಕ್ಷ್ಮೀಪತಿ.ಸಿ.ಜೆ

contributor

Editor - ಡಾ॥ಲಕ್ಷ್ಮೀಪತಿ.ಸಿ.ಜೆ

contributor

Similar News