'ಫ್ಯಾನ್ ಹೋ' ಚೀನಾದ ಮಾಯಾವಿ ಛಾಯಾಗ್ರಾಹಕ

Update: 2017-08-13 08:25 GMT

1950- 1965ರ ನಡುವಿನ ಜಗತ್ತಿನ ಅತ್ಯುತ್ತಮ ಛಾಯಾ ಗ್ರಾಹಕರ ಪಟ್ಟಿಯಲ್ಲಿ ನಮಗೆ ಸಿಗುವ ಹೆಸರು ಫ್ಯಾನ್ ಹೋ. ಹಾಂಕಾಂಗ್ ನಗರದ ಕಪ್ಪು-ಬಿಳುಪು ಚಿತ್ರಗಳ ಮೂಲಕ ಇಡೀ ಜಗತ್ತಿನ ಗಮನವನ್ನು ಸೆಳೆದ ಚೈನೀಸ್ ಛಾಯಾಗ್ರಾಹಕ ಹೋ, ಕಳೆದ ವರ್ಷ ತನ್ನ 84ನೆ ವಯಸ್ಸಿನಲ್ಲಿ ಅಸುನೀಗಿದ.

 ಹಾಂಕಾಂಗಿನ ರಸ್ತೆಗಳು, ಮಾರುಕಟ್ಟೆ ಗಳು, ಸ್ಲಂಗಳನ್ನು ತನ್ನ ಕ್ಯಾಮರಾ ಹಿಡಿದು ಶೋಧಿಸುತ್ತಾ ಹೋದ ಹೋ. ಅವನು ತೆಗೆದು ಫೋಟೊಗಳು ಹೊ ಹಾಂಕಾಂಗಿಗೆ ಬರೆದ ಪ್ರೇಮ ಪತ್ರವೆನ್ನಬಹುದು. ಈ ಕಪ್ಪು-ಬಿಳುಪು ಚಿತ್ರಗಳು ಬೆಳಕು ಹಾಗೂ ಸಂಯೋಜನೆ ಖಾಲಿ ರಸ್ತೆಯಲ್ಲಿ ಭಾರ ಹೊತ್ತು ನಡೆವ ಕೂಲಿಕಾರ, ಸೈಕಲ್ ಸವಾರ, ಮಕ್ಕಳಿಗೆ ಹೆರಳು ಹಾಕುತ್ತಿರುವ ತಾಯಿ, ಗಿಜಿ ಗಿಜಿ ಮಾರುಕಟ್ಟೆಯಲ್ಲಿ ಕಾಣುವ ಬೇನಾಮಿ ವಸ್ತುಗಳು - ಹೀಗೆ ಅತೀ ಸಾಮಾನ್ಯ ವೆನಿಸಿಕೊಳ್ಳುವ ಸನ್ನಿವೇಶಗಳ ಹಿಂದಿರುವ ಸೊಬಗನ್ನು ತನ್ನದೇ ರೀತಿಯಲ್ಲಿ ಅವನು ದಾಖಲಿಸಿದ್ದಾನೆ. ಅವನ ಚಿತ್ರಗಳು'Hong Kong Yester day'ಎಂಬ ಪುಸ್ತಕದಲ್ಲಿ ದಾಖಲಾಗಿವೆ.

  
  

 ಹೋ ತಂದೆ ಅವನ 14ನೆ ವಯಸ್ಸಿನಲ್ಲಿ ರೋಲಿ ಫ್ಲೈ ಕ್ಯಾಮರಾವನ್ನು ಕೊಟ್ಟ ರಂತೆ. ಅಲ್ಲಿಂದ ಶುರುವಾದ ಅವನ ಫೋಟೊ ಪಯಣ ಸಾಗುತ್ತಲೇ ಬಂದು, ಕೊನೆವರೆಗೂ ಆತ Rolliefley K4A ಕ್ಯಾಮರಾವನ್ನೇ ಉಪಯೋಗಿ ಸುತ್ತಿದ್ದ. ಅಂತಾರಾಷ್ಟ್ರೀಯ ಚಿತ್ರಪ್ರದರ್ಶನಗಳಲ್ಲಿ ಹೋ 250 ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದ. ಸಿನೆಮಾ ರಂಗದಲ್ಲಿ ಸಹ ಅವನು ಕೆಲಸ ಮಾಡಿದ್ದಾನೆ. ಹೋ ಚಿತ್ರಗಳು ನಗರ ಬದುಕಿನ ಅತ್ಯಂತ ಆಪ್ತ ಚಿತ್ರಣವನ್ನು, ಕಲಾತ್ಮಕವಾಗಿ ನಮಗೆ ನೀಡುತ್ತದೆ. ಅತ್ಯುತ್ತಮವಾದ ಫೋಟೊ ಎಷ್ಟು ಸರಳ ಹಾಗೆಯೇ ಕಷ್ಟಕರವಾದುದು ಎಂದು ತೋರಿಸಿ ಕೊಡುತ್ತಾನೆ ಹೋ.

ಫೋಟೊ ಪಾಯಿಂಟ್ ಉಷ .ಬಿ.ಎನ್.

Writer - ಉಷ.ಬಿ.ಎನ್.

contributor

Editor - ಉಷ.ಬಿ.ಎನ್.

contributor

Similar News