200 ಮೀ. ಓಟ: ಡಚ್‌ನ ಸ್ಕಿಪರ್ಸ್‌ಗೆ ಸ್ವರ್ಣ

Update: 2017-08-12 18:30 GMT

ಲಂಡನ್, ಆ.12: ‘ಫ್ಲೈಯಿಂಗ್ ಓಟಗಾರ್ತಿ’ ಎಂದೇ ಖ್ಯಾತಿ ಪಡೆದಿರುವ ಡಚ್‌ನ ಡಫನ್ ಸ್ಕಿಪರ್ಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 200 ಮೀ. ಓಟದಲ್ಲಿ ವಿಶ್ವ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.

25ರ ಹರೆಯದ ಸ್ಕಿಪರ್ಸ್ 22.05 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಅಲಿಸನ್ ಫೆಲಿಕ್ಸ್ ಹಾಗೂ ಮೆರಿನ್ ಒಟೆ ಬಳಿಕ ಒಂದಕ್ಕಿಂತ ಹೆಚ್ಚು ಪ್ರಶಸ್ತಿ ಜಯಿಸಿದ ಅಥ್ಲೀಟ್ ಎನಿಸಿಕೊಂಡಿದ್ದಾರೆ.

ಐವರಿಕೋಸ್ಟ್‌ನ ಮೇರಿ ಜೋಸಿ(22.08 ಸೆ.) ಹಾಗೂ ಬಹಾಮಸ್‌ನ ಶೌನಾ ಮಿಲ್ಲರ್ (22.15 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಹಂಚಿಕೊಂಡಿದ್ದಾರೆ. ಸ್ಕಿಪರ್ಸ್ ಕಳೆದ ವರ್ಷ ನಡೆದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News