ಪೊಲೆಂಡ್‌ನ ಪಾವೆಲ್ ಫಜ್ಡೆಕ್‌ಗೆ ಹ್ಯಾಟ್ರಿಕ್ ಸ್ವರ್ಣ

Update: 2017-08-12 18:38 GMT

ಲಂಡನ್, ಆ.12: ಪೊಲೆಂಡ್‌ನ ಹ್ಯಾಮರ್ ಥ್ರೋ ಚಾಂಪಿಯನ್ ಪಾವೆಲ್ ಫಜ್ಡೆಕ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಟ್ರಿಕ್ ಸ್ವರ್ಣ ಜಯಿಸಿದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ.

28ರ ಹರೆಯದ ಪಾವೆಲ್ 79.81 ಮೀ. ದೂರಕ್ಕೆ ಹ್ಯಾಮರ್ ಎಸೆದು ಚಿನ್ನ ತನ್ನದಾಗಿಸಿಕೊಂಡರು. ರಶ್ಯದ ವಾಲೆರಿ ಪ್ರೊಂಕಿನ್(78.16 ಮೀ.) ಹಾಗೂ ಪೊಲೆಂಡ್‌ನ ಇನ್ನೋರ್ವ ಸ್ಪರ್ಧಿ ವೋಜ್‌ಸಿಕ್ ನೊಸ್ಕಿ(78.03) ಕಂಚು ಜಯಿಸಿದರು. ನೊಸ್ಕಿ ಪ್ರಮುಖ ಟೂರ್ನಿಯಲ್ಲಿ ಸತತ ನಾಲ್ಕನೆ ಬಾರಿ ಕಂಚು ಜಯಿಸಿದರು.
 ಪಾವಲ್ 2013ರಲ್ಲಿ ಮಾಸ್ಕೊದಲ್ಲಿ, 2015ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News