×
Ad

ತಲೆಮೇಲೆ ಕಬ್ಬಿಣದ ರಾಡ್ ಬಿದ್ದು ಬಾಲಕಿ ಸಾವು

Update: 2017-08-13 18:02 IST

ಬೆಂಗಳೂರು, ಆ.13: ಆಟವಾಡುತ್ತಿದ್ದ ಬಾಲಕಿ ತಲೆ ಮೇಲೆ ಕಬ್ಬಿಣದ ರಾಡ್ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಮಹದೇವಪುರದ ಎಂವಿಜೆ ಲೇಔಟ್‌ನ ಬಾಬು ಮತ್ತು ವಿಜಯ ದಂಪತಿಯ ಪುತ್ರಿ ಪ್ರಿಯಾ(13) ಮೃತಪಟ್ಟ ಬಾಲಕಿ ಎಂದು ಪೊಲೀಸರು ಗುರುತಿಸಿದ್ದಾರೆ. ಈಕೆ ಎಂಟನೆ ತರಗತಿ ವ್ಯಾಸಂಗ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಘಟನೆ ವಿವರ: ಎಂವಿಜೆ ಲೇಔಟ್‌ನ ಮಕ್ಕಳ ಪಾರ್ಕ್‌ನಲ್ಲಿ ಆಟಿಕೆ ವಸ್ತುಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ ಇವುಗಳಲ್ಲಿ ಆಟವಾಡಲು ಪಾರ್ಕ್‌ನ ಸಿಬ್ಬಂದಿ ಮಕ್ಕಳಿಗೆ ಅವಕಾಶ ಕೊಟ್ಟಿದ್ದರು.ಶನಿವಾರ ಸಂಜೆ ಪ್ರಿಯಾ ಆಟವಾಡಲೆಂದು ಪಾರ್ಕ್‌ಗೆ ಬಂದಾಗ ಕಬ್ಬಿಣ್ಣದ ಸರಳು ತಲೆಯ ಮೇಲೆ ಬಿದ್ದು, ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.

 ಪಾರ್ಕ್ ನಿರ್ವಹಣೆ ಹೊಣೆ ಹೊತ್ತಿರುವ ಬಿಬಿಎಂಪಿ ಅಧಿಕಾರಿಗಳು ನಿರ್ಮಾಣ ಕಾರ್ಯ ನಡೆಯುತ್ತಿರುವಾಗಲೇ ಮಕ್ಕಳಿಗೆ ಆಟವಾಡಲು ಅನುಮತಿ ನೀಡಿದ್ದು ಪ್ರಕರಣಕ್ಕೆ ಮುಖ್ಯ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಪಾರ್ಕ್ ಉಸ್ತುವಾರಿ ವಹಿಸಿಕೊಂಡವರ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News