ಕ್ಯಾಥೋಲಿಕ್ ಚರ್ಚ್‌ನ ಇತಿಹಾಸವುಳ್ಳ ‘ಕಾಫಿ ಟೇಬಲ್ ಬುಕ್’ ಬಿಡುಗಡೆ

Update: 2017-08-13 14:19 GMT

ಬೆಂಗಳೂರು, ಆ.13: ನಗರದ ಅತ್ಯಂತ ಪುರಾತನ ಚರ್ಚ್‌ಗಳಲ್ಲಿ ಒಂದಾದ ಸೇಂಟ್ ಪ್ಯಾಟ್ರಿಕ್ ಚರ್ಚ್‌ನ 175 ವರ್ಷಾಚರಣೆಯ ಪ್ರಯುಕ್ತ ಕ್ಯಾಥೋಲಿಕ್ ಚರ್ಚ್‌ನ ಹುಟ್ಟು ಮತ್ತು ಬೆಳವಣಿಗೆಯ ಚರಿತ್ರೆಯನ್ನು ಹೊಂದಿರುವಂತಹ ‘ಕಾಫಿ ಟೇಬಲ್ ಬುಕ್’ ಕೃತಿಯನ್ನು ಆರ್ಚ್ ಬಿಷಪ್ ರೆವರೆಂಡ್ ಡಾ.ಬರ್ನಾಡ್ ಮೊರಾಸ್ ಲೋಕಾರ್ಪಣೆ ಮಾಡಿದರು.

ರವಿವಾರ ನಗರದ ಬ್ರಿಗೆಡ್ ರಸ್ತೆಯಲ್ಲಿರುವ ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ನಡೆದ ಸಮಾರಂಭದಲ್ಲಿ ‘ಕಾಫಿ ಟೇಬಲ್ ಬುಕ್’ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಡಾ.ಬರ್ನಾಡ್ ಮೊರಾಸ್, ನಗರದ ಹೃದಯ ಭಾಗದಲ್ಲಿ 175ವರ್ಷಗಳ ಹಿಂದೆ ವಿಶಿಷ್ಟ ವಾಸ್ತುಶಿಲ್ಪದಿಂದ ನಿರ್ಮಾಣಗೊಂಡ ಸೇಂಟ್ ಪ್ಯಾಟ್ರಿಕ್ ಚರ್ಚ್‌ನ ಸಂಪೂರ್ಣ ಇತಿಹಾಸವನ್ನು ಕೃತಿಯ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಕಾಫಿ ಟೇಬಲ್ ಬುಕ್‌ನಲ್ಲಿ ಬೆಂಗಳೂರಿನಲ್ಲಿ ಕ್ಯಾಥೋಲಿಕ್ ಚರ್ಚ್‌ನ ಹುಟ್ಟು ಮತ್ತು ಬೆಳವಣಿಗೆಯ ಚರಿತ್ರೆಯನ್ನು ದಾಖಲಿಸುತ್ತದೆ. ಅಪರೂಪದ ಫೋಟೊಗಳನ್ನು ಒಳಗೊಂಡ ಕೃತಿಯಲ್ಲಿ ಚರ್ಚ್‌ನ ಆರಂಭಿಕ ದಿನನಿತ್ಯದ ಜೀವನದಲ್ಲಿನ ಶ್ರೇಷ್ಟ ಒಳನೋಟವನ್ನು ಒದಗಿಸಲಿದೆ. ಇದೊಂದು ಐತಿಹಾಸಿಕ ಮಾಹಿತಿಯುಳ್ಳ ಶ್ರೇಷ್ಟ ಕೃತಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಫಿ ಟೇಬಲ್ ಬುಕ್‌ನ ಮಾರಾಟದಿಂದ ಬಂದ ಹಣವನ್ನು ಸೇಂಟ್ ಪ್ಯಾಟ್ರಿಕ್ ಚರ್ಚ್ ವತಿಯಿಂದ ದತ್ತು ಸ್ವೀಕಾರ ತೆಗೆದುಕೊಂಡಿರುವ ಕಡಿಸೇನಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಫಾ.ಸಿ.ಫ್ರಾನ್ಸಿಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News