ರುಪಿನ್ ಲೂವಿಸ್

Update: 2017-08-13 16:31 GMT

ಕೊಣಾಜೆ,ಆ.13: ಪಾವೂರು ಗ್ರಾಮ ಪಂಚಾಯಿತಿಯ ಸದಸ್ಯೆ ರುಪಿನ್ ಲೂವಿಸ್(65) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾದರು.

ಸಮಾಜ ಸೇವಕರಾಗಿದ್ದ ಅವರು 2015ರಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಾವೂರು ಗ್ರಾಮದ ಐದನೇ ವಾರ್ಡ್‍ನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿದ್ದು. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಎದುರಾದಾಗ ತಮ್ಮ ಮನೆಯ ಕೊಳವೆಬಾವಿಯಿಂದಲೇ ವಾರ್ಡ್‍ಗೆ ನೀರು ಸರಬರಾಜು ಮಾಡಿದ್ದರು. ಅವರ ಅಭಿಲಾಷೆಯಂತೆ ಅವರ ಕಣ್ಣುಗಳನ್ನು ಅಂಧರಿಗೆ ಬೆಳಕು ಮೂಡಿಸುವ ನಿಟ್ಟಿನಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾನ ಮಾಡಲಾಗಿದೆ.

ಅವರು ಪಾವೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ವಲೇರಿಯನ್ ಡಿಸೋಜ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ