ನಮ್ಮ ಪ್ರಜಾಪ್ರಭುತ್ವಕ್ಕೆ ಬಹುತ್ವ - ಜಾತ್ಯತೀತತೆಯ ಅಗತ್ಯ

Update: 2017-08-13 18:57 GMT
Editor : ಭಾಗ-1

ದೇಶದ ಅತ್ಯಂತ ಪ್ರತಿಷ್ಠಿತ ಕಾನೂನು ಶಾಲೆಗಳಲ್ಲಿ ಒಂದಾದ ಇಲ್ಲಿಗೆ ಕಾನೂನಿನ ಶಿಸ್ತಿನಲ್ಲಿ ಔಪಚಾರಿಕವಾಗಿ ಕೆಲಸ ಮಾಡದ ನನ್ನನ್ನು ಆಹ್ವಾನಿಸಿದ್ದಕ್ಕೆ, ಆ ಗೌರವ ಒದಗಿಸಿದ್ದಕ್ಕೆ ನಾನು ಸಂಸ್ಥೆಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗಕ್ಕೆ ಕೃತಜ್ಞನಾಗಿದ್ದೇನೆ.

ಕಾನೂನಿನ ವಿಶಾಲ ವಿಶ್ವ ಮತ್ತು ಕಾನೂನು ಪ್ರಕ್ರಿಯೆಗಳ ಬಗ್ಗೆ ಇಲ್ಲಿ ಸೇರಿರುವ ಪ್ರೇಕ್ಷಕರಿಗೆ ಚೆನ್ನಾಗಿ ಗೊತ್ತಿದೆಯಾದ್ದರಿಂದ ಮತ್ತು ಅದಕ್ಕೆ ಸಂಬಂಧಿಸಿದಂತೆ ನಾನು ಅದರ ಪ್ರಸ್ತುತತೆಯ ಬಗ್ಗೆ ಹೇಳಬಹುದಾದುದು ಬಹಳ ಕಡಿಮೆ ಮತ್ತು ವಿವೇಕ ಹಾಗೂ ಇತರ ಕಾರಣಗಳಿಂದಾಗಿ ನಾನಿಲ್ಲಿ ಶ್ರೀ ಬೊಂಬ್ಲೆ ಅವರ ‘ಕಾನೂನು ಒಂದು ಕತ್ತೆ’ ಎಂಬ ಹೇಳಿಕೆಯನ್ನು ಪುನರುಚ್ಚರಿಸುವ ಧೈರ್ಯ ಮಾಡಲಾರೆ ಅಥವಾ ಶೇಕ್ಸ್ ಪಿಯರ್ ನ ಪಾತ್ರ ‘ಹೆನ್ರಿ ಸಿಕ್ಸ್’ ನಲ್ಲಿ ಹೇಳುವ ‘ಎಲ್ಲ ವಕೀಲರನ್ನೂ ಕೊಲ್ಲಿ’ ಎಂಬ ಸಲಹೆಯನ್ನೂ ಪುನರುಚ್ಚರಿಸುವುದಿಲ್ಲ. ಇದಕ್ಕೆ ಬದಲಾಗಿ ನನ್ನ ಪ್ರಯತ್ನಗಳು ನಾಗರಿಕರ ಬದುಕಿಗಾಗಿರುವ ಕೆಲವು ಸಾಂವಿಧಾನಿಕ ತತ್ವಗಳನ್ನು, ಕಾನೂನು ಅಂಶಗಳನ್ನು ಮತ್ತು ನ್ಯಾಯಾಲಯದ ತೀರ್ಪು ಘೋಷಣೆಗಳ ಪ್ರಾಯೋಗಿಕ ಪರಿಣಾಮಗಳ ಕುರಿತಂತೆ ಅನ್ವೇಷಣೆ ಮಾಡುವುದಾಗಿದೆೆ.

ರಾಜಕೀಯ ತತ್ವಶಾಸ್ತ್ರದಲ್ಲಿ ಆಸಕ್ತಿ ಜೀವನ ಪರ್ಯಂತ ಬೆನ್ನಟ್ಟುತ್ತದೆ. ನಾನು ಜಾನ್ ಲಾಕೆಯ ‘ಎಲ್ಲಿ ಕಾನೂನು ಕೊನೆಗೊಳ್ಳುತ್ತದೋ ಅಲ್ಲಿ ದಬ್ಬಾಳಿಕೆ ಆರಂಭವಾಗುತ್ತದೆ’ ಎಂಬ ಹೇಳಿಕೆಯನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ಮನಸ್ಸಿನಲ್ಲಿ ಜಾನ್ ರಾಲ್‌ನ ‘ನ್ಯಾಯ ಎಂಬುದು ಸಾಮಾಜಿಕ ಸಂಸ್ಥೆಗಳ ಗುಣಧರ್ಮ’ ಎಂಬ ವಿವೇಚನೆಯನ್ನು ಮತ್ತು ಸಮಾಜದಲ್ಲಿ ಸಮಾನ ನಾಗರಿಕತ್ವದ ಸ್ವಾತಂತ್ರ್ಯ ಸ್ಥಾಪಿಸಲ್ಪಟ್ಟಿದೆ ಮತ್ತು ನ್ಯಾಯದಿಂದ ಪಡೆಯಲ್ಪಟ್ಟ ಹಕ್ಕುಗಳು ರಾಜಕೀಯ ಚೌಕಾಸಿಗೆ ಒಳಗಾಗುವುದಿಲ್ಲ ಅಥವಾ ಸಮಾಜದ ಹಿತಾಸಕ್ತಿಯ ಲೆಕ್ಕಾಚಾರಕ್ಕೆ ಅನುಗುಣವಾಗಿರುವುದಿಲ್ಲ’ ಎಂಬ ಹೇಳಿಕೆಯನ್ನೂ ಇಲ್ಲಿ ಉಲ್ಲೇಖಿಸುತ್ತೇನೆ. ರಾಲ್‌ನಿಗೆ ರಾಜಕೀಯ ತತ್ವಶಾಸ್ತ್ರದ ಮೊದಲ ಕೆಲಸವೆಂದರೆ ಅದರ ಪ್ರಯೋಗಾತ್ಮಕ ಪಾತ್ರವನ್ನು ನೋಡುವುದು.

ತೀವ್ರವಾಗಿ ವಿವಾದಾಸ್ಪದವಾದ ಪ್ರಶ್ನೆಗಳು ಹುಟ್ಟಿಕೊಳ್ಳುವ, ನಾಗರಿಕರಲ್ಲಿ ಪರಸ್ಪರ ಗೌರವ ಮತ್ತು ಸಾಮಾಜಿಕ ಸಹಕಾರಕ್ಕಾಗಿ ಕೆಲವು ತಾತ್ವಿಕ ಅಥವಾ ನೈತಿಕ ನೆಲೆಯಲ್ಲಿ ಹುಡುಕಾಟ. ಭಾರತದ ಸಂವಿಧಾನ ಮತ್ತು ಅದರ ಪೀಠಿಕೆ ನನಗೆ ಅತ್ಯಂತ ಪ್ರೀತಿ ಪಾತ್ರವಾದ ಆದರ್ಶಗಳು ಮತ್ತು ತತ್ವಗಳನ್ನು ಒಳಗೊಂಡಿದೆ. ಭಾರತದ ಜನರು ತಮಗೆ ತಾವೇ ಪ್ರಜಾಪ್ರಭುತ್ವವನ್ನು ಕೊಟ್ಟುಕೊಂಡಿದ್ದಾರೆ. ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಹಾಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಆದ್ಯತೆ ನೀಡುವ ಸಾಂವಿಧಾನಿಕ ವ್ಯವಸ್ಥೆ ಯೊಂದನ್ನು ಹೊಂದಿದ್ದಾರೆ.ಇವೆಲ್ಲ ಕಾನೂನುಗಳು, ಸಂಪ್ರದಾಯಗಳು ಮತ್ತು ಅನುಸರಣೆಯಲ್ಲಿ ಕೂಡಿಕೊಂಡಿವೆ.

ನಮ್ಮ ಸ್ಥಾಪಕ ಪಿತಾಮಹರು ಇರುವ ವಾಸ್ತವತೆಯನ್ನು ಪರಿಗಣಿಸಿದ್ದರು. ನಮ್ಮದು ಬಹುತ್ವದ ಸಮಾಜ ಮತ್ತು ಸಂಸ್ಕೃತಿ ಸಾಕಷ್ಟು ಸಮ್ಮಿಶ್ರಣಗಳನ್ನು ಒಳಗೊಂಡಿದೆ. ನಮ್ಮ 1.3 ಬಿಲಿಯನ್ ಜನಸಂಖ್ಯೆಯಲ್ಲಿ 4,635 ಸಮುದಾಯಗಳು ಇವೆ, ಇವರಲ್ಲಿ ಶೇ.78ರಷ್ಟು ಭಾಷಿಕ ಮತ್ತು ಸಾಂಸ್ಕೃತಿಕ ಮಾತ್ರವಲ್ಲ ಸಾಮಾಜಿಕ ವರ್ಗಗಳಿವೆ. ಧಾರ್ಮಿಕ ಅಲ್ಪಸಂಖ್ಯಾತರು ಒಟ್ಟು ಜನಸಂಖ್ಯೆಯ ಶೇ.19.4 ಇದ್ದಾರೆ. ಮಾನವ ವೈವಿಧ್ಯ ಕೂಡಾ ಶ್ರೇಣೀಕೃತ ಮತ್ತು ವಿಸ್ತಾರ ವ್ಯಾಪ್ತಿಯಲ್ಲಿವೆ.

ಈ ಬಹುತ್ವದಿಂದಾಗಿಯೇ ಸಂವಿಧಾನವು ಪ್ರಜಾಸತ್ತಾತ್ಮಕ ರಾಜ್ಯಾಡಳಿತ ಕ್ರಮ ಮತ್ತು ಜಾತ್ಯತೀತ ರಾಷ್ಟ್ರ ರಚನೆಯನ್ನು ಒಳಗೊಂಡಿದೆ. ಬಹುತ್ವ ಎನ್ನುವುದು ನೈತಿಕ ಮೌಲ್ಯವಾಗಿದ್ದು ಅದು ಸಾಮಾಜಿಕ ಬಹುತ್ವವನ್ನು ರಾಜಕೀಯದ ಮಟ್ಟಕ್ಕೆ ಪರಿವರ್ತಿಸುವ ಮತ್ತು ಬಹುತ್ವವನ್ನು ಒಳಗೊಂಡ ಏಕ ರಾಜಕೀಯ ವ್ಯವಸ್ಥೆಯನ್ನು ಎಲ್ಲಾ ಸಂಬಂಧಿತ ಗುಂಪುಗಳನ್ನು ಒಳಗೊಂಡಂತೆ ರಚಿತವಾದ ವ್ಯವಸ್ಥೆಯನ್ನು ರೂಪಿಸಲು ಸಲಹೆ ಮಾಡುತ್ತದೆ. ಇದರಲ್ಲಿ ಎಲ್ಲಾ ವ್ಯಕ್ತಿಗಳೂ ಕಾನೂನಾತ್ಮಕವಾಗಿ ಸಮಾನ ನೆಲೆಯಲ್ಲಿರುತ್ತಾರೆ. ಬಹುತ್ವವೆಂದರೆ ಇಂದಿನ ಆಧುನಿಕ ಸಂವೇದನೆಯಲ್ಲಿ ನಾಗರಿಕತ್ವದ ನಂಬಿಕೆಯೇ ಆಗಿದೆ.

ನಾಗರಿಕತ್ವವೆಂದರೆ - ‘ರಾಷ್ಟ್ರೀಯ ಜನಾಂಗ’ ಎನ್ನುವುದಕ್ಕಿಂತ ರಾಷ್ಟ್ರೀಯ ನಾಗರಿಕ ಎನ್ನುವ ಚಿಂತನೆಯೇ ಆಗಿದೆ. ರಾಷ್ಟ್ರೀಯ ಗುರುತಿಸುವಿಕೆ ಸುಲಭ ದಲ್ಲಿ ಒಡೆದು ಹಾಕಬಹುದಾದ ರಚನೆ ಮತ್ತು ಸಂಕೀರ್ಣ ಹಾಗೂ ರಾಷ್ಟ್ರೀಯ -ಪ್ರಜಾಗುಣಗಳ- ಬಹುತ್ವ-ಜನಾಂಗೀಯ ಸಮ್ಮಿಶ್ರಣ. ಅದೇ ರೀತಿ ಭಾರತೀಯತೆ ಯನ್ನು ಏಕ ಅಥವಾ ಎಲ್ಲವನ್ನೂ ಒಳಗೊಂಡ ಗುರುತಿಸುವಿಕೆ ಎಂದು ವ್ಯಾಖ್ಯಾನಿಸುವಂತಿಲ್ಲ. ಆದರೆ ಅದು ಬಹುಸ್ತರೀಯ ಗುರುತಿಸುವಿಕೆಯನ್ನು ಒಳಗೊಂಡ ಒಂದು ಚಿಂತನೆ.

ಆಧುನಿಕ ಪ್ರಜಾಪ್ರಭುತ್ವ ಮಾನವ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಒಳಗೊಳ್ಳುವ ರಾಜಕೀಯ ವ್ಯವಸ್ಥೆಯನ್ನು ಒದಗಿಸುತ್ತದೆ. ಅದೇ ತರ್ಕದಲ್ಲಿ ಮುಂದುವರಿದರೆ ಪ್ರಜಾಸತ್ತಾತ್ಮಕ ಸಮಾಜಗಳಲ್ಲಿ ಪರಸ್ಪರ ಮಿಳಿತಗೊಳ್ಳುವ ಅಗತ್ಯ ಒಂದು ಉಪ ಉತ್ಪನ್ನ ವಾಗಿರುತ್ತದೆ.ಗುರುತಿಸುವಿಕೆಯ ಅವಕಾಶವನ್ನು ಹಂಚಿಕೊಳ್ಳುವ ಮೂಲಕ ರಚನಾತ್ಮಕವಾಗಿ ಹೊರಗುಳಿಯುವ ಅಗತ್ಯವನ್ನು ಸಾಮಾನ್ಯವಾಗಿ ಅಂಗೀಕರಿಸಲಾ ಗಿರುವ ರಾಜಕೀಯ ಗುರುತಿಸುವಿಕೆಯನ್ನು ವಿವಿಧ ವೈಯಕ್ತಿಕ ಮತ್ತು ಗುಂಪು ಗುರುತಿಸುವಿಕೆಯಲ್ಲಿ ನಿಭಾಯಿಸುವುದೂ ಆಗಿರುತ್ತದೆ. ಪ್ರಜಾಪ್ರಭುತ್ವವನ್ನು ಸಾಂಪ್ರದಾಯಿಕವಾಗಿ ಇರುವ ಸಾಂಸ್ಥಿಕ ರಚನೆಯೊಂದಿಗೆ ಮೌಲ್ಯ ಮಾಪನ ಮಾಡುವುದಕ್ಕೆ ಬದಲು ವಿವಿಧ ವಲಯಗಳಿಂದ ಬರುವ ಬೇರೆ ಬೇರೆ ಜನರ ಧ್ವನಿಗಳನ್ನು ಆಲಿಸುವುದೂ ಆಗಿರುತ್ತದೆ.

ಬಹುತ್ವ ಮತ್ತು ಜಾತ್ಯತೀತತೆಯ ಈ ಎರಡು ಉದ್ದೇಶಗಳನ್ನು ಈಡೇರಿಸಲು ಅವಶ್ಯವಾದ ಪರಿಸ್ಥಿತಿಗಳು ಮತ್ತು ಅವಕಾಶವನ್ನು ನಾವು ಹೇಗೆ ಸೃಷ್ಟಿ ಮಾಡಬಹುದು ಮತ್ತು ಸಂವಿಧಾನದಲ್ಲಿ ಅಳವಡಿಕೆಯಾದ ಪ್ರಜಾಸತ್ತಾತ್ಮಕ ಉದ್ದೇಶಗಳಲ್ಲಿ ಸಮಗ್ರ ವಸ್ತುಸ್ಥಿತಿಗೆ ಅನುಗುಣವಾಗಿ ಇವುಗಳನ್ನು ಹೇಗೆ ಹೆಣಿಗೆ ಮಾಡಬಹುದು.?

ಇದಕ್ಕೆ ಉತ್ತರ ಜಾತ್ಯತೀತತೆ ಒಂದು ಚಿಂತನೆಯಾಗಿ ಮತ್ತು ರಾಜಕೀಯ ಸಲಕರಣೆಯಾಗಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿದ ತೀರ್ಪು ಭಾರತದಲ್ಲಿ ರಾಜ್ಯಾಡಳಿತಕ್ಕೆ ಒಂದು ಸ್ಪಷ್ಟ ಘೋಷಣೆ ಯಂತಿದೆ ಮತ್ತು ಅದನ್ನು ಇಲ್ಲಿ ಪುನರುಕ್ತಗೊಳಿಸುವುದು ಅವಶ್ಯವಿದೆ.

‘ಜಾತ್ಯತೀತತೆ ಒಂದು ಧನಾತ್ಮಕ ಮತ್ತು ಋಣಾತ್ಮಕವಾದ ಎರಡೂ ಅಂಶಗಳನ್ನು ಒಳಗೊಂಡಿದೆ. ಸಂವಿಧಾನ ಲೌಕಿಕ ವಿಚಾರದಲ್ಲಿ ಸಮತೂಕದ ಅಭಿಪ್ರಾಯವನ್ನು ಹೊಂದಿದೆ. ವ್ಯಕ್ತಿಯೊಬ್ಬರು ಒಂದು ನಿರ್ದಿಷ್ಟ ಮತಧರ್ಮದ ನಂಬಿಕೆಗಳನ್ನು ಅನುಸರಿಸುತ್ತಿರುವವರು ಸಾರ್ವಜನಿಕ ವ್ಯವಸ್ಥೆಯ ನೈತಿಕತೆ ಮತ್ತು ಆರೋಗ್ಯದ ಚೌಕಟ್ಟಿನೊಳಗೆ ಆತ ತನ್ನ ಧರ್ಮವನ್ನು ಪ್ರಚುರಪಡಿಸಲು ಮತ್ತು ಅನುಸರಿಸಲು ಅವಕಾಶವನ್ನು ಅದು ಕೊಡುತ್ತದೆ. ಜಾತ್ಯತೀತತೆಯ ಧನಾತ್ಮಕ ಅಂಶವನ್ನು ಕಾನೂನು ಅಥವಾ ಕಾರ್ಯಕಾರೀ ಆದೇಶದ ಮೂಲಕ ನಿಯಂತ್ರಿಸುವ ಅಧಿಕಾರವನ್ನು ಸರಕಾರಕ್ಕೆ ಕೊಡಲಾಗಿದೆ. ಸರಕಾರ ಅಥವಾ ರಾಜ್ಯ ಯಾವುದೇ ನಿರ್ದಿಷ್ಟ ಧರ್ಮವನ್ನು ರಾಜ್ಯದ ಧರ್ಮ/ಪ್ರಭುತ್ವದ ಧರ್ಮ ಎಂದು ಬೆಂಬಲಿಸಲು ಅವಕಾಶ ಕೊಡುವುದಿಲ್ಲ ಮತ್ತು ಈ ಸಂದರ್ಭದಲ್ಲಿ ತಾಟಸ್ಥವನ್ನು ಅನುಸರಿಸಬೇಕಾಗುತ್ತದೆ.

ಪ್ರಭುತ್ವವು ಜನರಲ್ಲಿ ವ್ಯಕ್ತಿತ್ವದ ಪೂರ್ಣ ಬೆಳವಣಿಗೆ ಆಗುವಂತಹ ವಿಚಾರ ಶೀಲತೆ ಬೆಳೆಸುವ ಮೂಲಕ ಜಾತ್ಯತೀತ ನೆಲೆಯಲ್ಲಿರುವಂತೆ ವೈಯಕ್ತಿಕ ಗೌರವ, ಪ್ರಾವೀಣ್ಯತೆ, ಪ್ರಾದೇಶಿಕ ಬೆಳವಣಿಗೆ, ಪ್ರಗತಿ ಮತ್ತು ರಾಷ್ಟ್ರೀಯ ಸಮಗ್ರತೆ..ಗಳಿಗೆ ಅನುಕೂಲಕರ ಆಗುವಂತಹ ವಾತಾವರಣವನ್ನು ನಿರ್ಮಾಣ ಮಾಡುವಂತಹ ಮತ್ತು ಜನರಲ್ಲಿ ಭರವಸೆ ಮೂಡಿಸುವಂತಹ ಸಮದೃಷ್ಟಿಯ ಕಾರ್ಯಗಳನ್ನು ಮಾಡುವ ಜವಾಬ್ದಾರಿ ಹೊಂದಿದೆ.

ಮತೀಯ ಸಹಿಷ್ಣುತೆ ಮತ್ತು ಭ್ರಾತೃತ್ವ ಮೂಲ ಅಂಶಗಳಾಗಿದ್ದು ರಾಷ್ಟ್ರೀಯ ಸಮಗ್ರತೆ ಮತ್ತು ಧಾರ್ಮಿಕ ಏಕತೆಯನ್ನು ಸಂವಿಧಾನ ಪ್ರತಿಪಾದಿಸುತ್ತದೆ. ರಾಜಕೀಯ ಪಕ್ಷಗಳು ಧರ್ಮದ ಆಧಾರದ ಮೇಲೆ ರೂಪಿಸಿದ ಕಾರ್ಯಕ್ರಮಗಳು ಅಥವಾ ತತ್ವಗಳು ಧರ್ಮವನ್ನು ರಾಜಕೀಯ ಆಡಳಿತದಲ್ಲಿ ತಂದಿರುವುದಾಗಿ ಪರಿಗಣಿಸಲ್ಪಡುತ್ತವೆ ಮತ್ತು ಅದನ್ನು ಸಂವಿಧಾನ ನಿರ್ಬಂಧಿಸುತ್ತದೆ. ಅದು ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸುತ್ತದೆ. ಧನಾತ್ಮಕ ಜಾತ್ಯತೀತತೆ ಇಂತಹ ನೀತಿಯನ್ನು ನಿರಾಕರಿಸುತ್ತದೆ ಮತ್ತು ಅದರ ಮುಂದುವರಿಕೆಯ ನಿಟ್ಟಿನಲ್ಲಿ ಯಾವುದೇ ಕ್ರಮ ಸಂವಿಧಾನದ ಮೂಲ ತತ್ವಗಳ ಉಲ್ಲಂಘನೆಯಾಗುತ್ತದೆ.

ಇಷ್ಟೊಂದು ಸ್ಪಷ್ಟತೆಯ ಬಳಿಕವೂ ಇದರ ಮಹತ್ವವನ್ನು ಕಡೆಗಣಿಸಲು ಮತ್ತು ಅದರೊಳಗೆ ಹೊಸ ಅರ್ಥ ಹುಡುಕಲು ನ್ಯಾಯಾಂಗ ಮತ್ತು ರಾಜಕೀಯ ವಲಯದ ವಿವಿಧ ಪ್ರಯತ್ನಗಳು ನಡೆದವು. ವಿಶ್ವಾಸಾರ್ಹ ಟೀಕಾಕಾರರು 1995ರ ಡಿಸೆಂಬರ್ 11ರಂದು ಸುಪ್ರೀಂಕೋರ್ಟ್ ಪೀಠ ನೀಡಿದ ತೀರ್ಪು ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾನಹಾನಿಕಾರಕ ಎಂದು ಹೇಳಿದ್ದಲ್ಲದೇ ವಿಸ್ತೃತ ಪೀಠ ಇದನ್ನು ಪುನರ್ ಪರಿಶೀಲಿಸಿ ‘ಅದರಿಂದಾದ ಹಾನಿಯನ್ನು ಸರಿಪಡಿಸಬೇಕು’ ಎಂದು ಹೇಳಿತ್ತು. ಅದನ್ನು ಇನ್ನು ಮಾಡಬೇಕಿದೆ.

ಗುರುತಿಸುವಿಕೆ ಮತ್ತು ಅಸಮಾನತೆಯ ಸಂಬಂಧ ಜಾತ್ಯತೀತತೆ ಮತ್ತು ಭಾರತದ ಪ್ರಜಾಪ್ರಭುತ್ವದಲ್ಲಿ ಇದೆ ಎಂದು ನ್ಯಾಯಯುತವಾಗಿ ಗುರುತಿಸಲಾಗುತ್ತಿದೆ. ಇಂದಿನ ಸವಾಲು ಏನೆಂದರೆ - ಜಾತ್ಯತೀತತೆಯ ಮೂಲ ತತ್ವಗಳಾದ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಹಿಷ್ಣುತೆಗಳನ್ನು ಪುನರುಚ್ಚರಿಸಿ ಅವುಗಳನ್ನು ಪುನರುಜ್ಜೀವ ನಗೊಳಿಸುವುದು. ಸಮಾನತೆಗೆ ಪೂರಕವಾಗಿರುವಂತೆ ಧಾರ್ಮಿಕ ಸ್ವಾತಂತ್ರ್ಯವನ್ನು ಅದರ ಸಾಮಾಜಿಕ ಆಯಾಮಗಳೊಂದಿಗೆ ಮರುಸ್ಥಾಪಿಸುವುದು ಹಾಗೂ ಸಹಿಷ್ಣುತೆ ಭಾರತೀಯ ಸಮಾಜದ ವಾಸ್ತವವೆಂಬಂತೆ ಪ್ರತಿಬಿಂಬಿಸುವುದು ಮತ್ತು ಅಂಗೀಕರಿಸುವುದು.

ಈ ಮೌಲ್ಯಗಳನ್ನು ಮತ್ತು ಉದ್ದೇಶಗಳನ್ನು ಸಾಕ್ಷೀಕರಿಸುವಲ್ಲಿ ಅವುಗಳ ಯಶಸ್ಸು ಮತ್ತು ಮಿತಿಗಳ ಕುರಿತು ಕಳೆದ ಏಳು ದಶಕಗಳ ಅನುಭವ ಬೆಳಕು ಚೆಲ್ಲುತ್ತದೆ. ಆಶಾವಾದಾದ ವಿವರಣೆ ದಟ್ಟವಾಗುತ್ತದೆ. ಅದರ ಕಠೋರ ವಿವರಣೆ ಬಿಕ್ಕಟ್ಟಾಗುತ್ತದೆ.
 ಹೀಗಿರುವಾಗ ಮೂರು ಪ್ರಶ್ನೆಗಳು ಮನಸ್ಸಿನೊಳಗೆ ಬರುತ್ತವೆ.
- ನಮ್ಮ ರಾಜಕೀಯದ ಆನುವಂಶಿಕ ಬಹುತ್ವವು ಭಾರತೀಯ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯಲ್ಲಿ ಯಾವ ರೀತಿ ಪ್ರತಿಬಿಂಬಿತವಾಗುತ್ತಿದೆ?.
- ಭಾರತೀಯ ಬಹುತ್ವಕ್ಕೆ ಪ್ರಜಾಪ್ರಭುತ್ವ ವಿವಿಧ ಆಯಾಮಗಳಲ್ಲಿ ನೀಡುತ್ತಿರುವ ಕೊಡುಗೆ ಏನು?
- ಜಾತ್ಯತೀತತೆಯನ್ನು ಅನುಸರಿಸುವಲ್ಲಿ ನಾವು ಎಷ್ಟು ದೃಢವಾಗಿದ್ದೇವೆ?
ನಮ್ಮ ಪ್ರಜಾಸತ್ತೆಯ ರಾಜ್ಯಾಡಳಿತವು ಬಹುತ್ವವನ್ನು ಒಳಗೊಂಡಿದೆ. ಯಾಕೆಂದರೆ ಅದು ಈ ಕೆಳಗಿನ ಅಂಶಗಳಲ್ಲಿ ಬಹುತ್ವವನ್ನು ಗುರುತಿಸುತ್ತದೆ ಮತ್ತು ಅನುಸರಿಸುತ್ತದೆ. (1) ಅದರ ಒಕ್ಕೂಟ ರಚನೆಯಲ್ಲಿ (2) ಅಲ್ಪಸಂಖ್ಯಾತರ ಭಾಷಿಕ ಮತ್ತು ಧಾರ್ಮಿಕ ಹಕ್ಕುಗಳಲ್ಲಿ (3) ವೈಯಕ್ತಿಕ ಹಕ್ಕುಗಳಲ್ಲಿ. ಮೊದಲನೆಯದ್ದು ವಿವಿಧ ಪ್ರಮಾಣದ ಯಶಸ್ಸುಗಳನ್ನು, ಪ್ರಾದೇಶಿಕ ಒತ್ತಡಗಳನ್ನು ಒಳಗೊಂಡಿದ್ದರೆ, ಎರಡನೆಯದ್ದು ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರಿಗೆ ಅವಕಾಶವನ್ನು ಖಾತ್ರಿಪಡಿಸುತ್ತದೆ ಮತ್ತು ಮೂರನೆಯದ್ದು ಅಭಿಪ್ರಾಯದ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಹಾಗೂ ಭಿನ್ನಮತದ ಹಕ್ಕನ್ನು ರಕ್ಷಿಸುತ್ತದೆ.

 ರಾಷ್ಟ್ರೀಯ ಸಮಗ್ರತೆ ಬಗ್ಗೆ ಒಂದು ಪ್ರಶ್ನೆಯನ್ನು ಎತ್ತಲಾಗುತ್ತದೆ. ಚಿಂತನಾಕ್ರಮದಲ್ಲಿ ಮತ್ತು ಪ್ರಾಯೋಗಿಕವಾಗಿ ಸಮಗ್ರತೆ ಎನ್ನುವುದು ಸಮರೂಪಗೊಳಿಸುವುದು, ಸಮಾನ ವಂಶ ಸ್ವಾಮ್ಯವನ್ನು ಪ್ರತಿಪಾದಿಸುವುದಲ್ಲ. ಕೆಲ ವರ್ಷಗಳ ಹಿಂದೆ ರಾಜಕೀಯ ವಿಜ್ಞಾನಿಯೊಬ್ಬರು ಹೇಳಿದ್ದರು-‘ಕ್ರಿಯಾಶೀಲ ರಾಜಕೀಯದಲ್ಲಿ ರಾಷ್ಟ್ರೀಯ ಸಮಗ್ರತೆ ಎಂಬ ಪದ ಮತ್ತು ಅದರ ಅರ್ಥ ಬಲು ದೊಡ್ದ ರಾಜಕೀಯ ಸಮುದಾಯದಲ್ಲಿರುವ ಹಲವು ಘಟಕಗಳನ್ನು ಸೇರಿಸುವುದು ವಿನಹ ಸಂಯೋಜನೆ ಅಲ್ಲ, ಏಕತೆ ವಿನಹ ಏಕರೂಪತೆ ಅಲ್ಲ, ಸರಿ ಹೊಂದಿಕೊಳ್ಳುವುದು ವಿನಹ ವಿಲಯನ ಅಲ್ಲ, ಇರುವುದು ವಿನಹ ನಿರ್ನಾಮ ಮಾಡುವುದಲ್ಲ, ಸಮಾಗಮ ಹೊರತು ಕರಗುವಿಕೆ ಅಲ್ಲ, ಒಗ್ಗೂಡುವಿಕೆ ವಿನಹ ವಿಭಜನೆ ಅಲ್ಲ..... ಆಗ ಸಮಗ್ರತೆ ಎನ್ನುವುದು ವೈವಿಧ್ಯವನ್ನು ಏಕರೂಪಕ್ಕೆ ಬದಲಾಯಿಸುವ ಪ್ರಕ್ರಿಯೆ ಅಲ್ಲ. ಅದು ವೈವಿಧ್ಯದಲ್ಲಿ ಏಕತೆ. ಇದರಲ್ಲಿ ವೈವಿಧ್ಯ ಮತ್ತು ಸಾಮ್ಯತೆಯನ್ನು ಉಳಿಸಿಕೊಳ್ಳುವಂತಹದ್ದು.
ಭಾರತದ ಪ್ರಜಾಸತ್ತೆಯಲ್ಲಿ ಇದು ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ. ಸ್ತರಗಳಿಂದ, ವೈವಿಧ್ಯಗಳಿಂದ, ಶ್ರೇಣೀಕರಣದಿಂದ ಉಂಟಾಗುವ ಹೊರಗಿಡುವಿಕೆಯ ವಾಸ್ತವ ಇರುವ ಇಲ್ಲಿ ಜತೆಯಾಗಿ ಕಾರ್ಯಾಚರಿಸಿ ಮತ್ತು ಅಂತರ್ ವಿಭಜನೆ ರಚನೆ ಇರಲಿ ಎನ್ನುವಂತಹ ಸ್ಥಿತಿ ಇರುತ್ತದೆ.

ಸಾಮಾಜಿಕ ವೈವಿಧ್ಯ ಮತ್ತು ಅಸಮಾನತೆಗಳನ್ನು ನೋಡಿದರೆ, ರಾಜಕೀಯಒಳಗೊಳ್ಳುವಿಕೆಗೆ ಬದ್ಧವಾದ ವ್ಯವಸ್ಥೆಯ ಆಯ್ಕೆ ತಾನಾಗಿಯೇ ‘ನಂಬಿಕೆಯ ನೆಗೆತ’ ವಾಗಿರುತ್ತದೆ. ಸಂವಿಧಾನವು ಏಕಪ್ರಕಾರ ವಯಸ್ಕ ಅಭಿಮತಕ್ಕೆ ಅವಕಾಶ ಮಾಡಿಕೊ ಡುತ್ತದೆ. ಮತ್ತು ಪ್ರತಿನಿಧಿತ್ವದ ವ್ಯವಸ್ಥೆ ವೆಸ್ಟ್ ಮಿನಿಸ್ಟರ್ ಮಾದರಿಯನ್ನು ಅನುಸರಿಸುತ್ತದೆ. ಕಾನೂನಿನ ಆಡಳಿತ ಎಂಬ ಮಾತು ಅಧಿಕಾರವನ್ನು ಉತ್ತರದಾಯಿತ್ವಗೊಳಿಸುವ, ಆಡಳಿತವನ್ನು ಸಮರ್ಪಕಗೊಳಿಸುವ ಮತ್ತು ರಾಜ್ಯಾಡಳಿತವನ್ನು / ಪ್ರಭುತ್ವವನ್ನು ನೈತಿಕಗೊಳಿಸುವ ಜನತೆಯ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ.

ಮುಂದುವರಿಯುವುದು

Writer - ಭಾಗ-1

contributor

Editor - ಭಾಗ-1

contributor

Similar News