ಪದಕ ಗಳಿಕೆಯಲ್ಲಿ ಉಸೇನ್ ಬೋಲ್ಟ್‌ರನ್ನು ಹಿಂದಿಕ್ಕಿದ ಮಹಿಳೆ ಯಾರು ಗೊತ್ತೇ?

Update: 2017-08-14 11:32 GMT

  ಲಂಡನ್, ಆ.14: ವಿಶ್ವದ ಶರವೇಗದ ಓಟಗಾರ ಉಸೇನ್ ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕೊನೆಯ ಓಟ ರಿಲೇಯಲ್ಲಿ ಇನ್ನೊಂದು ಪದಕವನ್ನು ಗೆಲ್ಲಲು ಸಾಧ್ಯವಾಗದೆ ಕಣ್ಣೀರ ವಿದಾಯ ಹೇಳಿದ ಬೆನ್ನಲ್ಲೇ ಅವರ ದಾಖಲೆಯನ್ನು ಮಹಿಳಾ ಅಥ್ಲೀಟ್ ಒಬ್ಬರು ಸದ್ದಿಲ್ಲದೆ ಹಿಂದಿಕ್ಕಿದ್ದಾರೆ. ಅವರು ಅಮೆರಿಕದ ಓಟಗಾರ್ತಿ ಆಲಿಸನ್ ಫೆಲಿಕ್ಸ್.

  ಜಮೈಕಾದ ಉಸೇನ್ ಬೋಲ್ಟ್ ಈ ಬಾರಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟದಲ್ಲಿ ಕಂಚು ಜಯಿಸಿ ಈ ವರೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ ಗಳಿಸಿದ ಪದಕಗಳ ಸಂಖೆಯನ್ನು 14ಕ್ಕೆ ಏರಿಸಿದ್ದರು.ಹದಿನೈದನೆ ಪದಕ ಗೆಲ್ಲುವ ಅವರ ಕನಸು ಈಡೆರಲಿಲ್ಲ. ರಿಲೇ ಓಟದ ಮಧ್ಯೆ ಗಾಯಗೊಂಡು ಮುಗ್ಗರಿಸಿದರು. ಬೋಲ್ಟ್ ಅವರನ್ನು ಬಳಿಕ ವೀಲ್ ಚೇರ್ ಮೂಲಕ ಕ್ರೀಡಾಂಗಣದಿಂದ ಹೊರ ಸಾಗಿಸಲಾಗಿತ್ತು. ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 6 ಆವೃತ್ತಿಗಳಲ್ಲಿ ಒಟ್ಟು 11 ಚಿನ್ನ , 2 ಬೆಳ್ಳಿ ಮತ್ತು 1 ಕಂಚು ಜಯಿಸಿದ್ದಾರೆ. ಫೆಲಿಕ್ಸ್ 2005ರಿಂದ ಈ ತನತ 7 ಆವೃತ್ತಿಗಳಲ್ಲಿ ಭಾಗವಹಿಸಿದ್ದಾರೆ 11 ಚಿನ್ನ ,3 ಬೆಳ್ಳಿ ಮತ್ತು 2 ಕಂಚು ಪಡೆದಿದ್ದಾರೆ.2013ರಲ್ಲಿ ಅವರಿಗೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.

   ಬೋಲ್ಟ್ ಒಲಿಂಪಿಕ್ಸ್‌ನಲ್ಲಿ 8 ಚಿನ್ನ ಪಡೆದಿದ್ದಾರೆ. ಆದರೆ ಫೆಲಿಕ್ಸ್ 6 ಚಿನ್ನ ಮತ್ತು 3 ಬೆಳ್ಳಿ ಪಡೆದಿದ್ದಾರೆ. ಬೋಲ್ಟ್ ಅವರಿಗಿಂತ ಹೆಚ್ಚು ಪದಕ ಜಯಿಸಿದ್ದಾರೆ.
 31ರ ಹರೆಯದ ಫೆಲಿಕ್ಸ್ ಅಮೆರಿಕ ಪರ 4 100 ಮೀಟರ್ ರೀಲೆ ಮತ್ತು 4 400 ಮೀಟರ್ ರಿಲೇಯಲ್ಲಿ ಅವಳಿ ಚಿನ್ನ ಪಡೆದು ಚಿನ್ನದ ದಾಖಲೆಯನ್ನು 11ಕ್ಕೆ ಏರಿಸಿದರು. ಬೋಲ್ಟ್ ಅವರ ಚಿನ್ನದ ದಾಖಲೆಯನ್ನು ಸರಿಗಟ್ಟಿದರು. 400 ಮೀಟರ್ ಓಟದಲ್ಲಿ ಕಂಚು ಪಡೆದ ಫೆಲಿಕ್ಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ನಲ್ಲಿ ಪಡೆದ ಒಟ್ಟು ಪದಕಗಳ ಸಂಖ್ಯೆಯನ್ನು 16ಕ್ಕೆ ಏರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 8ನೆ ಬಾರಿ ಭಾಗವಹಿಸಿರುವ ಫೆಲಿಕ್ಸ್ ನಿವೃತ್ತಿಯ ವಿಚಾರವನ್ನು ತಳ್ಳಿ ಹಾಕಿದ್ದಾರೆ. ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮುಂದಿನ ಆವೃತ್ತಿಗಳಲ್ಲೂ ಪದಕದ ಬೇಟೆ ನಡೆಸುವುದಾಗಿ ಹೇಳಿದ್ದಾರೆ. ಇನ್ನಷ್ಟು ಪದಕಗಳನ್ನು ಖಾತೆಗೆ ಸೇರಿಸುವ ಯೋಜನೆಯಲ್ಲಿದ್ದಾರೆ ಫೆಲಿಕ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News