ಶ್ರೀಲಂಕಾದಲ್ಲಿ ಸ್ವಾತಂತ್ರೋತ್ಸವ ಆಚರಿಸಿದ ವಿರಾಟ್ ಕೊಹ್ಲಿ

Update: 2017-08-15 09:31 GMT

ಕ್ಯಾಂಡಿ(ಶ್ರೀಲಂಕಾ), ಆ.15: ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಐತಿಹಾಸಿಕ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಕ್ರಿಕೆಟ್ ತಂಡದ ಸದಸ್ಯರು ಮಂಗಳವಾರ 71ನೆ ಸ್ವಾತಂತ್ರೋತ್ಸವ ಆಚರಿಸಿದರು.

 ನಾಯಕ ವಿರಾಟ್ ಕೊಹ್ಲಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಕೋಚ್ ರವಿ ಶಾಸ್ತ್ರಿ ಹಾಗೂ ತಂಡದ 15 ಸದಸ್ಯರು ಹಾಗೂ ಸಹಾಯಕ ಸಿಬ್ಬಂದಿ ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆಯನ್ನು ಹಾಡಲಾಯಿತು. ಹಾರಾಡುತ್ತಿದ್ದ ತ್ರಿವರ್ಣ ಧ್ವಜದತ್ತ ನೋಡಿದ ಕೊಹ್ಲಿ ಗೌರವ ಸಲ್ಲಿಸಿದರು.

 ಕ್ಯಾಂಡಿಯಲ್ಲಿರುವ ಪಲ್ಲೆಕಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಧ್ವಜಾರೋಹಣ ಮಾಡಲಾಯಿತು. ಇದೇ ಸ್ಟೇಡಿಯಂನಲ್ಲಿ 3ನೆ ಟೆಸ್ಟ್ ಪಂದ್ಯವನ್ನು ಆಡಿದ್ದ ಭಾರತ ವಿದೇಶ ನೆಲದಲ್ಲಿ ಮೊದಲ ಬಾರಿ 3-0 ಅಂತರದಿಂದ ವೈಟ್‌ವಾಶ್ ಸಾಧಿಸಿತ್ತು. ಕೊಹ್ಲಿ ನೇತೃತ್ವದಲ್ಲಿ ಭಾರತ ಸತತ 8ನೆ ಸರಣಿ ಜಯ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News