ಮಕ್ಕಾ: ಕೆಸಿಎಫ್ ವತಿಯಿಂದ ಹಜ್ಜಾಜಿಗಳೊಂದಿಗೆ ಸಂಭ್ರಮದ ಸ್ವಾತಂತ್ರ್ಯೋತ್ಸವ

Update: 2017-08-15 12:36 GMT

ಮಕ್ಕಾ, ಆ. 15:  ಪವಿತ್ರ ಮಕ್ಕಾದಲ್ಲಿ ಕನಾ೯ಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಭಾರತದ ಹಜ್ಜಾಜಿಗಳೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮಂಗಳೂರು ಈದ್ಗಾ ಜುಮಾ ಮಸೀದಿ ಖತೀಬ್ ಸ್ವದಕತ್ತುಲ್ಲಾ ಮುಸ್ಲಿಯಾರ್ ಧ್ವಜಾರೋಹಣ ನಿರ್ವಹಿಸಿದರು. ಕೆಸಿಎಫ್ ಕಾರ್ಯಕರ್ತರು ಭಾರತದ ರಾಷ್ಟ್ರ ಗೀತೆ ಹಾಡಿದರು.

ಈ ಸಂದರ್ಭ ಮಾತನಾಡಿದ ದಾರುಲ್ ಇರ್ಶಾದ್ ಎಜುಕೇಶನ್ ಮಾಣಿ ಇದರ ಆರ್ಗನೈಸರ್ ಉಮರ್ ಸಖಾಫಿ ಪರಪ್ಪು, ಭಾರತದ ಸ್ವತಂತ್ರಕ್ಕಾಗಿ ಮಡಿದ ಮಹಾತ್ಮ ಗಾಂದೀಜಿ, ಮೌಲಾನ ಸೌಕತ್ ಅಲಿ, ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ (ರ.ಅ) ಹೀಗೇ ಹಲವಾರು  ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತೆರೆದಿಟ್ಟರು. ಭಾರತೀಯರಾದ ನಾವು ಜಾತಿ, ಮತ, ಭೇದಭಾವವನ್ನು ಮೆರೆತು  ಐಕ್ಯತೆಯ ಭಾರತವನ್ನು ಕಟ್ಟುವಂತೆ ಕರೆ ನೀಡಿದರು.

ಕೆಸಿಎಫ್ ಮುಖಂಡ ಅಬ್ಬಾಸ್ ಹಾಜಿ ಎಲಿಮಲೆ ಮಾತಾನಾಡಿ ನಾವು ವಿದೇಶದಲ್ಲಿದ್ದರೂ,  ಭಾರತದ ಮೇಲಿನ ಪ್ರೀತಿ, ಪ್ರೇಮ  ನಮ್ಮ ಮನದಲ್ಲಿ ಎಂದೆಂದಿಗೂ ಅಮರವಾಗಿದೆ ಎಂದರು. ಜಿದ್ದಾ ಝೋನಲ್ ಪ್ರಧಾನ ಕಾಯ೯ದಶಿ೯ ಇಬ್ರಾಹಿಂ ಕಿನ್ಯ ಭಾರತೀಯರಿಗೆ ಸ್ವಾತಂತ್ರ್ಯ ಶುಭಾಶಾಯಗಳನ್ನು ತಿಳಿಸುವ ಮೂಲಕ ಕಾಯ೯ಕ್ರಮಕ್ಕೆ ಶುಭ ಹಾರೈಸಿದರು.

ಸ್ವಯಂ ಸೇವಕರನ್ನು ಉದ್ದೇಶಿಸಿ ಭಾರತದ ಹಜ್ಜಾಜಿಗಳ  ಪ್ರಶಂಶನೀಯ ಮಾತುಗಳು

ಹಜ್ಜಾಜಿಗಳ ಸೇವೆಯಲ್ಲಿ ನಿರತಾರದ KCF ಕಾಯ೯ಕತ೯ರು ಹಮ್ಮಿಕೊಂಡ ಭಾರತದ  ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ ನಾವೆಲ್ಲಾ ಬಹಳ ಸಂತಸರಾಗಿದ್ದೇವೆ.

- ಮುಹಮ್ಮದ್ ಮುಸ್ತಾಫ ಮಂಚಿಲ (ಸಯ್ಯದ್ ಮದನಿ ಚಾರ್ಟೆಬಲ್ ಟ್ರಸ್ಟ್ ಕೇಂದ್ರ ಜುಮಾ ಮಸ್ಜಿದ್ ಉಳ್ಳಾಲ್ ಸದಸ್ಯರು)

ಕೆಸಿಎಫ್ ಕಾಯ೯ತರು ಹಜ್ಜಾಜಿಗಳಾದ ನಮಗೆ ನೀಡಿದ ಸಹಾಯ ಸಹಕಾರಗಳು ಖಂಡಿತವಾಗಿಯು ಜೀವನದಲ್ಲಿ ಮರೆಯಲು ಅಸಾಧ್ಯ.
- ಮಾಜೀದ್ ಹಸನ್ ಹಾಸನ (ಸರಕು ಉದ್ಯಮಿ ಹಾಸನ)

ಹಗಲಿರುಳು ನಮ್ಮ  ಕಟ್ಟಡಗಳಿಗೆ ಭೇಟಿ ನೀಡಿ  ಅರೋಗ್ಯ ಕ್ಷೇಮ ಇನ್ನಿತರ ಕುಂದು ಕೂರೆತಗಳನ್ನು ವಿಚಾರಿಸುತ್ತಾ ನಮ್ಮಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಕೆಸಿಎಫ್ ಕಾಯ೯ಕರ್ತರಿಗೆ ಅಲ್ಲಾಹನು ಇನಷ್ಟು ಶಕ್ತಿ ನೀಡಲಿ 
- ಹುಸೈನ್ ಮುಸ್ಲಿಯಾರ್ ಕನ್ನಂಗಾರ್ (ಸಹಾಯಕ ಖತೀಬರು, ಕೇಂದ್ರ ಜುಮಾ ಮಸ್ಜಿದ್ ಕನ್ನಂಗಾರ್)
 
KCF ಸಂಘಟನೆಯಿಂದ ಕನಾ೯ಟಕದ ಹಜ್ಜಾಜಿಗಳಿರುವ ಪ್ರತಿ ಕಟ್ಟಡಗಳಲ್ಲಿ  ಉತ್ತಮ ಹಜ್ಜ್ ತರಗತಿ, ಆರೋಗ್ಯ ಪರೀಶೀಲನೆ ಹೀಗೇ  ಹಲವಾರು ಸೇವೆ ಹಜ್ಜಾಜಿಗಳಾದ ನಮಗೆ ದೊರೆಯುತ್ತಿವೆ ಎಂದು ಹೇಳಲು ನಾನು ಹೆಮ್ಮೆ ಪಡುತೇನೆ
- ಸಿ.ಕೆ. ಮುಸ್ಲಿಯಾರ್ ಕೂಡಗು

ವೇದಿಕೆಯಲ್ಲಿ ಹೆಚ್.ವಿ.ಸಿ. ಕೋ ಆಡಿ೯ನೇಟರ್ ಮೂಸಾ ಹಾಜಿ ಕಿನ್ಯಾ, ಕೆಸಿಎಫ್ ಮಕ್ಕತ್ತುಲ್ ಮುಕರ್ರಮ್ ಸೆಕ್ಟರ್ ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್ ಹಾಗೂ ಮತ್ತಿತರ ಹೆಚ್.ವಿ.ಸಿ ಸ್ವಯಂ ಸೇವಕರು, ಹಜ್ಜಾಜಿಗಳು ಭಾಗವಹಿಸಿದ್ದರು.

ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮ್ ಸೆಕ್ಟರ್ ಮುಖಂಡರಾದ ಹನೀಫ್ ಸಖಾಫೀ ಬೋಳ್ಮಾರ್ ಸ್ವಾಗತಿಸಿದರು. ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮ್ ಸೆಕ್ಟರ್ ಪ್ರಧಾನ ಕಾಯ೯ದಶಿ೯ ಕಲಂದರ್ ಶಾಫಿ ಅಸೈಗೋಳಿ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.

Writer - ಕಲಂದರ್ ಶಾಫಿ ಅಸೈಗೋಳಿ

contributor

Editor - ಕಲಂದರ್ ಶಾಫಿ ಅಸೈಗೋಳಿ

contributor

Similar News