ದಹಿಹಂಡಿ ಉತ್ಸವದಲ್ಲಿ ಇಬ್ಬರು ಮೃತ್ಯು, 117 ಮಂದಿಗೆ ಗಾಯ

Update: 2017-08-16 05:08 GMT

ಮುಂಬೈ, ಆ.16: ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ ನಡೆಯುವ ದಡಿಹಂಡಿ(ಮೊಸರುಕುಡಿಕೆ) ಉತ್ಸವದಲ್ಲಿ ಇಬ್ಬರು ಮೃತಪಟ್ಟಿದ್ದು, ಸುಮಾರು 117 ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ಪಾಲ್ಘರ್‌ನಲ್ಲಿ ನಡೆದ ದಹಿಹಂಡಿಯ ಆಚರಣೆಯ ವೇಳೆ 21ರ ಹರೆಯದ ‘ಗೋವಿಂದ’(ದಹಿಹಂಡಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು) ಮೃತಪಟ್ಟಿದ್ದಾರೆ. ಐರೋಲಿಯಲ್ಲಿ 34 ವಯಸ್ಸಿನ ವ್ಯಕ್ತಿ ಮೊಸರುಕುಡಿಕೆ ಒಡೆಯಲು ರಚಿಸಲಾಗುವ ಪಿರಾಮಿಡ್‌ನ ವೇಳೆ ವಿದ್ಯುತ್ ತಗಲಿ ಸಾವನ್ನಪ್ಪಿದ್ದಾರೆ.

ಮಹಾನಗರ ಮುಂಬೈವೊಂದರಲ್ಲೇ ಮೊಸಕುಕುಡಿಕೆ ಸಂಭ್ರಮಾಚರಣೆಯ ವೇಳೆ ಸುಮಾರು 117 ಮಂದಿ ಗಾಯಗೊಂಡಿದ್ದಾರೆ.

ಪಾಲ್ಘರ್‌ನಲ್ಲಿ ಮೃತಪಟ್ಟ ಯುವಕನನ್ನು ರೋಹನ್ ಕಿಣಿ ಎಂದು ಗುರುತಿಸಲಾಗಿದೆ.

ಕಿಣಿ ಮಾನವ ನಿರ್ಮಿತ ಪಿರಾಮಿಡ್‌ನಲ್ಲಿ ಭಾಗವಹಿಸಿದ್ದರು. ದಹಿಹಂಡಿಯನ್ನು ಒಡೆದ ಬಳಿಕ ಪಿರಾಮಿಡ್‌ನಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರಿಗೆ ಅಪಸ್ಮಾರ(ಫೀಟ್ಸ್)ಬಂದು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News