ಬೌನ್ಸರ್‌ಗೆ ಪಾಕ್ ಯುವ ಕ್ರಿಕೆಟಿಗ ಬಲಿ

Update: 2017-08-16 09:50 GMT

 ಕರಾಚಿ, ಆ.16: ಮರ್ದಾನ್‌ನಲ್ಲಿ ಕ್ಲಬ್ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ಬೌನ್ಸರ್‌ವೊಂದು ತಗಲಿ ಪಾಕಿಸ್ತಾನದ ಯುವ ಬ್ಯಾಟ್ಸ್‌ಮನ್ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಟ್ವಿಟರ್ ಖಾತೆಯಲ್ಲಿ ಈ ಸುದ್ದಿಯನ್ನು ಪ್ರಕಟಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆಟಗಾರರು ಎಲ್ಲ ಸಮಯದಲ್ಲೂ ಹೆಲ್ಮೆಟ್ ಧರಿಸುವುದು ಅಗತ್ಯವಾಗಿದೆ ಎಂದಿದೆ.

ಪಾಕಿಸ್ತಾನದ ಸ್ವಾತಂತ್ರ ದಿನದಂದೇ(ಆ.14) ಈ ದುರಂತ ಸಂಭವಿಸಿದೆ.ಝುಬೈರ್ ಕ್ವೆಟ್ಟಾ ಬೇರ್ಸ್‌ ಟ್ವೆಂಟಿ-20 ತಂಡದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ.

‘‘ಕ್ರಿಕೆಟಿಗ ಝಬೈರ್ ಅಹ್ಮದ್ ದುರಂತ ಸಾವು ಕಂಡಿದ್ದಾರೆ. ಹೆಲ್ಮೆಟ್‌ನ್ನು ಎಲ್ಲ ಸಮಯದಲ್ಲೂ ಕಡ್ಡಾಯವಾಗಿ ಧರಿಸಬೇಕು. ಝುಬೈರ್ ಕುಟುಂಬಕ್ಕೆ ನಮ್ಮ ಅನುಕಂಪ ಸದಾ ಇರುತ್ತದೆ’’ ಎಂದು ಪಿಸಿಬಿ ಟ್ವೀಟ್ ಮಾಡಿದೆ.
ಆಸ್ಟ್ರೇಲಿಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮಂಗಳವಾರ ಅಭ್ಯಾಸ ಪಂದ್ಯ ಆಡುತ್ತಿದ್ದಾಗ ಸಹ ಆಟಗಾರ ಜೋಶ್ ಹೇಝಲ್‌ವುಡ್ ಬೌನ್ಸರ್‌ನ್ನು ಹುಕ್ ಮಾಡಲು ಹೋಗಿ ಕುತ್ತಿಗೆಗೆ ಚೆಂಡಿನ ಏಟು ಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು.
ಆಸ್ಟ್ರೇಲಿಯದ ಟೆಸ್ಟ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಮೂರು ವರ್ಷಗಳ ಹಿಂದೆ ಶೀಫೀಲ್ಡ್ ಶೀಲ್ಡ್ ಪಂದ್ಯ ಆಡುತ್ತಿದ್ದಾಗ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News