ಸರಕಾರದಿಂದಲೇ ಯೋಗಿ ವೇಮನ ಜಯಂತಿ: ಸಂಸ್ಕೃತಿ ಸಚಿವೆ ಉಮಾಶ್ರೀ
Update: 2017-08-17 19:58 IST
ಬೆಂಗಳೂರು, ಆ. 17: ಪ್ರತಿವರ್ಷವೂ ಜನವರಿ 29ರಂದು ಮಹಾಯೋಗಿ ವೇಮನ ಜಯಂತಿಯನ್ನು ರಾಜ್ಯ ಸರಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಇಂದು ಇಲ್ಲಿ ಪ್ರಕಟಿಸಿದ್ದಾರೆ.
ತೆಲುಗಿನ ಯೋಗಿ ವೇಮನ 15ನೆ ಶತಮಾನದ ಪ್ರಮುಖ ಕವಿಗಳಲ್ಲಿ ಒಬ್ಬರು. ರಾಜಮನೆತನದಲ್ಲಿ ಹುಟ್ಟಿದ ವೇಮನ ಬದುಕಿನ ಸತ್ಯಗಳನ್ನು ಅರಿಯುತ್ತಾ ಹೋದಂತೆ ಅವರು ಮಹಾ ಯೋಗಿಯಾಗಿ ಬದಲಾದರು. ಸರ್ವಸ್ವವನ್ನೂ ತ್ಯಜಿಸಿ ಯೋಗಿಯಾಗಿ ಸಾಹಿತ್ಯಕವಾಗಿ ಅನನ್ಯವಾದ ಕೃತಿಗಳನ್ನು ರಚನೆ ಮಾಡಿ ದಾರ್ಶನಿಕ ಎನಿಸಿಕೊಂಡವರು.
ಅವರ ಬದುಕಿನ ಆದರ್ಶಗಳನ್ನು ನೆನೆಯುವ ಸಲುವಾಗಿ ರಾಜ್ಯ ಸರಕಾರ 2018ರ ಜನವರಿ 29ರಂದು ವೇಮನ ಜಯಂತಿ ಆಚರಿಸಲಾಗುವುದು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಜಯಂತಿ ಆಚರಣೆಗೆ 69ಲಕ್ಷ ರೂ.ಬಿಡುಗಡೆ ಮಾಡಲಾಗಿದೆ ಎಂದು ಉಮಾಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.