×
Ad

ಮಾಂಗಲ್ಯ ಸರ ಕಸಿದು ಪರಾರಿ

Update: 2017-08-17 20:05 IST

ಬೆಂಗಳೂರು, ಆ.17: ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಾಯು ವಿಹಾರ ನಡೆಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಪ್ರಕರಣ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಶಾರದಮ್ಮ ಎಂಬುವರ ಸರ ಕಳವು ಮಾಡಲಾಗಿದ್ದು, ಶಂಕರಪುರ ಪಾರ್ಕ್ ಬಳಿ ಗುರುವಾರ ಬೆಳಗ್ಗೆ 7:45ರ ಸುಮಾರಿಗೆ ವಾಯು ವಿಹಾರ ಮಾಡುತ್ತಿದ್ದ ಶಾರದಮ್ಮ ಅವರ ಬಳಿ ಕಾರಿನಲ್ಲಿ ಬಂದ ಇಬ್ಬರು ಆರೋಪಿಗಳು ಅವರ ಬಳಿ ವಿಳಾಸ ಕೇಳುವ ನೆಪದಲ್ಲಿ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News