×
Ad

ಬಿಬಿಎಂಪಿಯಿಂದ ಬೀದಿನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭ

Update: 2017-08-17 20:14 IST

ಬೆಂಗಳೂರು, ಆ.17: ನಗರ ವ್ಯಾಪ್ತಿಯಲ್ಲಿ ಬೀದಿನಾಯಿ ಹಾವಳಿ ಪ್ರಕರಣಕ್ಕೆ ಬಿಬಿಎಂಪಿ ತಕ್ಷಣವೇ ಸ್ಪಂದಿಸಿದ್ದು, ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿದೆ.

ಗುರುವಾರ ಬೆಳಗ್ಗೆಯಿಂದಲೇ ನಗರದಲ್ಲಿ ನಾಯಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದೆ. ಎಂಎಸ್‌ಆರ್ ನಗರದ ವೆಲ್‌ಫೇರ್ ಅಸೋಸಿಯೇಷನ್ ಮತ್ತು ಪಾಲಿಕೆ ಸದಸ್ಯೆ ಕಾರ್ಪೋರೇಟರ್ ಸುಮಂಗಲ ನೇತೃತ್ವದಲ್ಲಿ ನಾಯಿ ಹಿಡಿಯುವ ಕಾರ್ಯಾಚರಣೆ ನಡೆದಿದೆ.

ಬಲೆಗಳನ್ನು ಬಳಸಿ ನಾಯಿಗಳನ್ನು ಹಿಡಿಯಲಾಗಿದ್ದು, ಬಳಿಕ ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ನಗರದ ಹೊರವಲಯಗಳಲ್ಲಿ ಬಿಟ್ಟು ಬರಲಾಗುತ್ತದೆ. ಈಗಾಗಲೇ ಅಂದಾಜು 9-10 ನಾಯಿಗಳನ್ನು ಹಿಡಿಯಲಾಗಿದೆ. ಶುಕ್ರವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆ ಸನಿಹದ ಎಂಎಸ್‌ಆರ್ ನಗರದಲ್ಲಿ ಬೀದಿ ನಾಯಿಗಳು ಗೃಹಿಣಿಯೋರ್ವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದವು. ಇದೆಲ್ಲಾ ರಸ್ತೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಸಮಸ್ಯೆಗೆ ತಕ್ಷಣ ಬಿಬಿಎಂಪಿ ಸ್ಪಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News