ಮೇವು ಹಗರಣ: ವಿಚಾರಣೆಗೆ ಹಾಜರಾದ ಲಾಲುಪ್ರಸಾದ್

Update: 2017-08-18 12:22 GMT

ರಾಂಚಿ, ಆ.18: ಮೇವುಹಗರಣಕ್ಕೆ ಸಂಬಂಧಿಸಿ ಬಿಹಾರದ ಮಾಜಿ ಸಚಿವ ಹಾಗೂ ಆರ್‌ಜೆಡಿ ಅಧ್ಯಕ್ಷ ಲಾಲುಪ್ರಸಾದ್ ಯಾದವ್ ಸಿಬಿಐ ವಿಶೇಷ ನ್ಯಾಯಾಲಯದೆದುರು ವಿಚಾರಣೆಗೆ ಹಾಜರಾದರು.

ಹಗರಣಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳ ವಿಚಾರಣೆಗೆ ಲಾಲು ಹಾಜರಾದರು. ಆದರೆ ಮೂರೂ ಪ್ರಕರಣಗಳಲ್ಲಿ ಸಾಕ್ಷಿಗಳು ಗೈರುಹಾಜರಾಗಿದ್ದರು. ಮುಂದಿನ ವಿಚಾರಣೆಗೆ ಆಗಸ್ಟ್ 25ರಂದು ಹಾಜರಾಗುವಂತೆ ಕೋರ್ಟ್ ಸೂಚಿಸಿತು. ಆದರೆ ಪಾಟ್ನದಲ್ಲಿ ಆರ್‌ಜೆಡಿ ರ‍್ಯಾಲಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಆಗಸ್ಟ್ 27ರ ಬಳಿಕ ವಿಚಾರಣೆಗೆ ದಿನ ನಿಗದಿಪಡಿಸುವಂತೆ ಲಾಲು ಮನವಿ ಮಾಡಿಕೊಂಡರು.

  ಮೇವು ಹಗರಣಕ್ಕೆ ಸಂಬಂಧಿಸಿ- ರಾಂಚಿಯಲ್ಲಿ 49 ಕೋಟಿ ರೂ., ಚೈಬಾಸದಲ್ಲಿ 33.60 ಕೋಟಿ ರೂ ಹಾಗೂ ದಿಯೋಗರ್ ಖಜಾನೆಯಿಂದ 95 ಲಕ್ಷ ರೂ. ಹಣವನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಪ್ರಕರಣದಲ್ಲಿ ಲಾಲುಪ್ರಸಾದ್ ವಿಚಾರಣೆ ಎದುರಿಸುತ್ತಿದ್ದಾರೆ. 2013ರಲ್ಲಿ ಒಂದು ಪ್ರಕರಣದಲ್ಲಿ ಅವರಿಗೆ ಐದು ವರ್ಷಗಳ ಶಿಕ್ಷೆ ಘೋಷಿಸಲಾಗಿದ್ದು ಇದೀಗ ಅವರು ಜಾಮೀನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News