×
Ad

ಬೆಂಗಳೂರು; ಜಪಾನ್ ಮಹಿಳೆ ಮೇಲೆ ಹಲ್ಲೆ: ಇಬ್ಬರ ಬಂಧನ

Update: 2017-08-18 20:38 IST

ಬೆಂಗಳೂರು, ಆ.18: ಕಾರನ್ನು ಅಡ್ಡಾದಿಡ್ಡಿ ಓಡಿಸಿ ಜಪಾನ್ ಮಹಿಳೆಯ ಕಾರಿಗೆ ಢಿಕ್ಕಿ ಹೊಡೆದು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಪೀಣ್ಯ ಸಂಚಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಾರು ಚಾಲಕ ರಾಜು, ನರಸಿಂಹ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರೂ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಲ್ಲದೇ ನೈಸ್ ಟೋಲ್ ಬಳಿ ನಿಲ್ಲಿಸಿದ್ದ ಜಪಾನ್ ಮಹಿಳೆಯ ಕಾರಿಗೂ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು.

 ಈ ದೃಶ್ಯ ಗಮನಿಸಿದ ವ್ಯಕ್ತಿಯೊಬ್ಬರು ನಮ್ಮ 100ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಘಟನೆ ನಡೆದ ಅರ್ಧಗಂಟೆಯೊಳಗೆ ಆರೋಪಿಗಳನ್ನು ನಂದಿನಿ ಲೇಔಟ್ ಬಳಿ ಪತ್ತೆ ಹಚ್ಚಿದ ಪೀಣ್ಯ ಸಂಚಾರ ಠಾಣಾ ಪೊಲೀಸರು ಕಾರು ಚಾಲಕ ರಾಜು, ನರಸಿಂಹ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಕಾರನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಮೊಕದ್ದಮೆ ದಾಖಲಿಸಿಕೊಂಡಿರುವ ಪೀಣ್ಯ ಸಂಚಾರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News