ತ್ಯಾಜ್ಯ ವಸ್ತುಗಳನ್ನು ಕೂಡಲೇ ಸಾಗಿಸಿ

Update: 2017-08-18 18:34 GMT

ಮಾನ್ಯರೆ,

ಮನಪಾ ವ್ಯಾಪ್ತಿಯ ಕೆಲವು ಮನೆಗಳವರು ತಮ್ಮ ಮನೆ ವಠಾರದೊಳಗಿನ ಕೆಲವು ಗಿಡ ಮರಗಳ ರೆಂಬೆ - ಕೊಂಬೆಗಳನ್ನು ಕಡಿದು ಎಲ್ಲೆಲ್ಲಿ ಕಸ ತ್ಯಾಜ್ಯ ಹಾಕುವ ಡಬ್ಬಿ/ಸ್ಥಳಗಳಿದ್ದವೊ ಅಲ್ಲಿ ತಂದು ಎಸೆದು ತೆಪ್ಪಗಿರುತ್ತಾರೆ. ಆದರೆ ಅಂತಹ ಗುಡ್ಡೆ ಹಾಕಿದ ತ್ಯಾಜ್ಯ ರಸ್ತೆಬದಿಯಲ್ಲಿ ದಿನ-ವಾರಗಟ್ಟಲೆ ಇದ್ದರೂ ಅದಕ್ಕೆ ಮುಕ್ತಿ ಕಾಣಿಸುವವರು ಇಲ್ಲ. ಅಲ್ಲದೆ ಕೆಲವು ವಾರ್ಡ್‌ಗಳಲ್ಲಿ ಮನೆಗಳಲ್ಲಿನ ತ್ಯಾಜ್ಯವನ್ನೂ ಸರಿಯಾಗಿ ಕೊಂಡೊಯ್ಯುವುದಿಲ್ಲ.

ಮನೆ, ರಸ್ತೆ ಬದಿಯ ತ್ಯಾಜ್ಯಗಳನ್ನು ನಿಯಮಿತವಾಗಿ ಕೊಂಡೊಯ್ಯದಿದ್ದರೆ ಗುತ್ತಿಗೆದಾರರ ಆವಶ್ಯಕತೆಯೇಕೇ? ಆಯಾಯ ವಾರ್ಡಿನ ಕಾರ್ಪೊರೇಟರುಗಳು ಇಂತಹ ಅವ್ಯವಸ್ಥೆಯ ಬಗ್ಗೆ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Writer - -ಜೆ.ಎಫ್.ಡಿ’ಸೋಜ, ಅತ್ತಾವರ

contributor

Editor - -ಜೆ.ಎಫ್.ಡಿ’ಸೋಜ, ಅತ್ತಾವರ

contributor

Similar News