ಅವಳ ನೆನಪಾದಾಗಲೆಲ್ಲಾ ಗದ್ದೆಯ ಬಳಿ ಬಂದು ನಾವು ಜತೆಯಾಗಿ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ: ಸುಲ್ತಾನ್ ಖಾ

Update: 2017-08-19 08:07 GMT

ನಾನು, ನನ್ನ ಪತ್ನಿ ಮಹಿನೂರ್ ಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ 20 ದಿನಗಳಿಂದ ಆಕೆ ಢಾಕಾದಲ್ಲಿ ವಾಸಿಸುವ ನಮ್ಮ ಹಿರಿಯ ಪುತ್ರಿ ಮೊಂಜು ಬಳಿ ಹೋಗಿದ್ದಾಳೆ. ನನ್ನ ಪುತ್ರಿ ಮತ್ತಾಕೆಯ ಪತಿ ಅಲ್ಲಿನ ಟೆಕ್ಸ್ ಟೈಲ್ ಫ್ಯಾಕ್ಟರಿಯೊಂದರಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ನನ್ನ ಪುತ್ರಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾಳೆ. ನನ್ನ ಪುತ್ರಿ ಮತ್ತಾಕೆಯ ಪತಿ ಕೊಳಚೆಗೇರಿಯೊಂದರಲ್ಲಿ ಸಣ್ಣ ಕೊಠಡಿಯೊಂರಲ್ಲಿ ವಾಸಿಸುತ್ತಿದ್ದು, ಅಲ್ಲಿ ಬೇರೆ ಯಾರಿಗೂ ಇರಲು ಸ್ಥಳಾವಕಾಶವೇ ಇಲ್ಲ !

ನಾನು ಮಹಿನೂರ್ ಳನ್ನು 40 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರಲಿಲ್ಲ. ನಮಗೆ ಐದು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ನನ್ನನ್ನು ಜತೆಯಾಗಿ ಕರೆದುಕೊಂಡು ಹೋಗದೆ ಆಕೆ ತನ್ನ ಹೆತ್ತವರ ಮನೆಗೆ ಭೇಟಿ ನೀಡುವುದೇ ಇಲ್ಲ. ಆಕೆಯಿಲ್ಲದೆ ನನ್ನ ಕೈಯ್ಯಲ್ಲಿ ಏನೂ ಮಾಡಲು ಸಾಧ್ಯವಿಲ್ಲವೆಂದು ಆಕೆಗೆ ಗೊತ್ತು. ನನ್ನ ಅತೀ ಸಣ್ಣ ಅವಶ್ಯಕತೆಗಳಿಗೂ ನಾನು ಆಕೆಯನ್ನೇ ಅವಲಂಬಿಸಿದ್ದೇನೆ.

ಕಳೆದ 20 ದಿನಗಳಿಂದ ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಕೆಯ ನೆನಪಾದಾಗಲೆಲ್ಲಾ ನಾನು ನನ್ನ ಭತ್ತದ ಗದ್ದೆಯ ಬಳಿ ಬಂದು ಕುಳಿತು ನಾವು ಜತೆಯಾಗಿ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಆಕೆಯಿಲ್ಲದೆ ಯಾವುದೂ ಸರಿಯಾಗಿ ನಡೆಯದು. ಆಕೆಯ ನೆನಪಾದಾಗಲೆಲ್ಲಾ ನನ್ನ ಕಣ್ಣುಗಳು ಒದ್ದೆಯಾಗುತ್ತವೆ. ಆದರೆ ಈ ಇಳಿ ವಯಸ್ಸಿನಲ್ಲಿ ನನ್ನ ದುಃಖವನ್ನು ಯಾರ ಬಳಿಯೂ ಹೇಳಿಕೊಳ್ಳುವ ಹಾಗಿಲ್ಲ. ಎರಡು ದಿನಗಳ ಹಿಂದೆ ನನ್ನ ಮಗಳು ನನಗೆ ಫೋನ್ ಮಾಡಿ ತಾಯಿಯ ಕೈಗೆ ಫೋನ್ ನೀಡಿದಳು. ಆಕೆಯನ್ನು ನಾನೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆಂದು ಆಕೆಗೆ ಹೇಳುವ ಹಾಗೂ ಇಲ್ಲ. ನಾನು ನಡುಗುತ್ತಿದ್ದೆ ಹಾಗೂ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಪ್ರಾಯಶಃ ಆಕೆಗೆ ನನ್ನ ಪರಿಸ್ಥಿತಿ ಅರ್ಥವಾಗಿರಬೇಕು. ಆಕೆ ಮೌನವಾಗಿ ನನ್ನ ಉಸಿರಾಟದ ಸದ್ದನ್ನು ಕೇಳಿಸಿಕೊಳ್ಳುತ್ತಿದ್ದಳು. ಕೆಲ ಸೆಕೆಂಡುಗಳ ನಂತರ ಆಕೆ ನಿಧಾನವಾಗಿ ‘‘ನಾನು ಬಹಳ ಬೇಗನೇ ಹಿಂದಿರುಗುತ್ತೇನೆ,’’ ಎಂದು ಬಿಟ್ಟಳು.

- ಸುಲ್ತಾನ್ ಖಾ, 65

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News