ಡೊರೊತಿಯಾ ಲ್ಯಾಂಗ್

Update: 2017-08-19 12:04 GMT

ಡೊರೊತಿಯಾ ಲ್ಯಾಂಗ್, ಅಮೆರಿಕದ ಡಾಕ್ಯುಮೆಂಟರಿ ಛಾಯಾಗ್ರಹಣದ ಬಹುಮುಖ್ಯ ಹೆಸರು. 1930ರಲ್ಲಿ ಅಮೆರಿಕ ಹಾಗೂ ಇನ್ನಿತರ ಕೈಗಾರೀಕರಣಗೊಂಡ ರಾಷ್ಟ್ರಗಳು ಬಹು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತು. ಈ ಮಹಾ ಖಿನ್ನತೆ (The Great depresson ಮಹಾ ಆರ್ಥಿಕ ಕುಸಿತ)ಯ ಪರಿಣಾಮವಾಗಿ ಆದ ನಿರುದ್ಯೋಗ, ಹಸಿವು, ಹಿಂಸೆಯನ್ನು ದಟ್ಟವಾಗಿ ತನ್ನ ಛಾಯಾ ಚಿತ್ರಗಳಿಂದ ದಾಖಲಿಸಿದವಳು ಡೊರೊತಿಯಾ. ಇಂದಿಗೂ ಆ ಮಹಾ ಆರ್ಥಿಕ ಖಿನ್ನತೆಯ ಕುರಿ ತಾಗಿ ಮಾತನಾಡುವಾಗ, ಡೊರಿತಿಯಾತೆಗೆದ ಚಿತ್ರವನ್ನೇ ಆ ಸಮಯದ ಬಿಕ್ಕಟ್ಟನ್ನುಪ್ರತಿಬಿಂಬಿಸಲು ಉಪಯೋಗಿಸಲಾಗುತ್ತದೆ. ಅವಳ ‘The Migrant Mo ther’ಅಂದಿನ ಅಭದ್ರತೆ ಹಾಗೂ ಹಸಿವಿ ನಿಂದ ತಲ್ಲಣಗೊಂಡ ತಾಯಿಯೊಬ್ಬಳು ತನ್ನ ಮಕ್ಕಳೊಂದಿಗೆ ಕುಳಿತಿರುವ ಚಿತ್ರವಾಗಿದೆ.

ಡೊರೊತಿಯಾ ಸ್ವತಃ ತನ್ನ ಜೀವನದಲ್ಲಿ ನೊಂದವಳು. ತನ್ನ ಏಳನೆ ವಯಸ್ಸಿನಲ್ಲಿ ಅವಳ ಬಲಗಾಲು ಶಕ್ತಿ ಹೀನವಾಗಿ, ‘‘ಜೀವನವಿಡಿ ಅವಳು ಕುಂಟುತ್ತಲೇ ನಡೆಯುವಂತೆ ಮಾಡಿತು. ಆದರೆ ಅವಳ ಈ ಸಮಸ್ಯೆ ಎಂದಿಗೂ ಅವಳನ್ನು ಹಿಂಸಿಸಲಿಲ್ಲ. ತನ್ನ ಅಂಗಬಲಹೀನತೆಯ ಬಗ್ಗೆ ಮಾತನಾಡುತ್ತಾ ‘‘ಅದು ನನಗೆ ಮಾರ್ಗ ದರ್ಶನವಿತ್ತಿತು. ದಿಕ್ಕು ತೋರಿಸಿತು, ನನಗೆ ಸಹಾಯ ಮಾಡಿತು, ನನಗೆ ಅವಮಾನವನ್ನು ಪರಿಚಯಿಸಿತು. ನಾನೆಂದೂ ಅದನ್ನು ಮೀರಲು ಸಾಧ್ಯ ವಾಗಲಿಲ್ಲ. ಆದರೆ ನನಗೆ ನನ್ನ ಅಂಗ ಬಲಹೀನತೆಯ ಶಕ್ತಿ ಹಾಗೂ ಸತ್ವದ ಪೂರ್ಣ ಅರಿವು ಇದೆ’’. ಎನ್ನುತ್ತಿದ್ದಳು.

 

ಗುಳೆ ಹೋದ ರೈತರು, ಕಾರ್ಮಿಕರು, ಎತ್ತಂಗಡಿಯಾದ ಪರಿವಾರಗ ಳೊಡನೆ ಒಡನಾಡುತ್ತಾ, ಅವರ ಜೀವನವನ್ನು ಬಹು ಹತ್ತಿರದಿಂದ ತನ್ನ ಕ್ಯಾಮರಾದಲ್ಲಿ ದಾಖಲಿಸಿದ್ದಾಳೆ ಡೊರೊತಿಯಾ. ಪರ್ಲ್ ಹಾರ್ಬರ್‌ನ ಮೇಲೆ ನಡೆದ ಜಪಾನಿನ ದಾಳಿಯ ನಂತರ ಅಮೆರಿಕದಲ್ಲಿರುವ ಜಪಾನಿನ ಮೂಲದವರನ್ನು ಎತ್ತಂಗಡಿ ಮಾಡಲು ಹೊರಟ ಸರಕಾರದ ವಿರುದ್ಧ ಪ್ರತಿಭಟಿಸಿದ ಡೊರೊತಿಯಾ ಆಗ ಆಕೆಗೆ ನೀಡಿದ್ದ ಖ್ಯಾತ ಗುಗಲ್‌ಹೈಮ್ ಫೆಲೋಶಿಪ್ಪನ್ನು ನಿರಾಕರಿಸಿದಳು. ಕ್ಯಾರ್ಲಿಫೋನಿಯಾದ ಗ್ರಾಮೀಣ ಪ್ರದೇಶಗಳಲ್ಲಿರುವ ಕ್ಯಾಂಪುಗಳಲ್ಲಿ ವಾಸವಿದ್ದ ಜಪಾನಿನ ಮೂಲದವರನ್ನು ಸಂದರ್ಶಿಸಿ, ಫೋಟೊ ತೆಗೆದಳು. ಅವಳ ಫೋಟೊಗಳು ಅಂದಿನ ಅಮೆರಿಕ ಸರಕಾರವನ್ನು ಎಷ್ಟು ಕಟುವಾಗಿ ಖಂಡಿಸಿತೆಂದರೆ, ಅವಳು ತೆಗೆದ ನೂರಾರು ಫೋಟೊಗಳನ್ನು ಅಮೆರಿಕಾದ ಸೇನೆ ಮುಟ್ಟುಗೋಲು ಮಾಡಿಕೊಂಡಿತು.

ಅತ್ಯಂತ ಸ್ಫೂರ್ತಿದಾಯಕ, ಅರ್ಥಪೂರ್ಣ ಸಾಮಾಜಿಕ ದಾಖಲಾತಿ ಛಾಯಾಗ್ರಹಣವನ್ನು ಡೊರೊತಿಯಾ ತನ್ನ ಜೀವಮಾನದಲ್ಲಿ ಮಾಡಿದ್ದಾಳೆ.

ಫೋಟೊ ಪಾಯಿಂಟ್  ಉಷ .ಬಿ.ಎನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News