ರಾಜ್ಯದಲ್ಲಿ ಮೋಡ ಬಿತ್ತನೆಗೆ ಕ್ಷಣಗಣನೆ

Update: 2017-08-19 15:02 GMT

ಬೆಂಗಳೂರು, ಆ. 19: ರಾಜ್ಯದಲ್ಲಿನ ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಇಲ್ಲಿನ ಬೆಂಗಳೂರಿನ ಗಾಂಧಿ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ರಾಡಾರ್ ಸ್ಥಾಪನೆ ಕಾರ್ಯ ಶನಿವಾರ ಪೂರ್ಣಗೊಂಡಿದೆ.

360 ಡಿಗ್ರಿ ರೇಡಿಯಸ್‌ನಲ್ಲಿ 200 ಕಿಲೋ ಮೀಟರ್ ದೂರದಲ್ಲಿ ಇರತಕ್ಕಂತ ಮೋಡ ಸಾಂದ್ರತೆ ಹಾಗೂ ತೀವ್ರತೆಯನ್ನು ಮಳೆ ಬರುವಿಕೆ ಸಾಮರ್ಥ್ಯವನ್ನು ರಾಡಾರ್ ಚಿತ್ರಗಳು ನಿಯಂತ್ರಣ ಕೊಠಡಿಯ ಕಂಪ್ಯೂಟರ್‌ಗೆ ತಲುಪುತ್ತವೆ ಎಂದು ತಿಳಿಸಲಾಗಿದೆ.

ಅಲ್ಲಿಂದ ವಿಎಚ್‌ಎಫ್ ಸಂಪರ್ಕದ ವಾಹಕದ ಮೂಲಕ ಮೋಡ ಬಿತ್ತನೆ ವಿಮಾನದ ಪೈಲೆಟ್‌ಗೆ ಸಂಕೇತಗಳನ್ನು ರವಾನಿಸಲಾಗುತ್ತದೆ. ಅನುಮತಿಯ ನಂತರ ವಿಮಾನದಿಂದ ಮೋಡ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News