×
Ad

ಚಿಟ್‌ಫಂಡ್‌ನಲ್ಲಿ ಲಕ್ಷಾಂತರ ರೂಪಾಯಿ ವಂಚನೆ: ಪೊಲೀಸ್ ಠಾಣೆಗೆ ದೂರು ನೀಡಿದ ನಟಿ ಸಂಜನಾ

Update: 2017-08-19 20:59 IST

ಬೆಂಗಳೂರು, ಆ.19: ನಗರದ ಪ್ರಸಿದ್ಧಿ ಹೆಸರಿನ ಚಿಟ್‌ಫಂಡ್‌ನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದಾಗಿ ಆರೋಪಿಸಿ ಚಿತ್ರನಟಿ ಸಂಜನಾ ಗಲ್ರಾನಿ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳೆದೆರಡು ವರ್ಷಗಳಿಂದ ಮಲ್ಲೇಶ್ವರಂನಲ್ಲಿರುವ ಮಹೇಶ್ ಎಂಬಾತ ಪ್ರಸಿದ್ಧಿ ಹೆಸರಿನಲ್ಲಿ ಚಿಟ್‌ಫಂಡ್ ನಡೆಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳಿನಿಂದ ಚಿಟ್ ಫಂಡ್ ಕಚೇರಿಗೆ ಬಾಗಿಲು ಹಾಕಿ ನಾಪತ್ತೆಯಾಗಿ ಸುಮಾರು 28 ಲಕ್ಷ ರೂ. ವಂಚನೆ ಮಾಡಿರುವುದಾಗಿ ಸಂಜನಾ ಆರೋಪಿಸಿದ್ದಾರೆ.

ನಟಿ ಸಂಜನಾ ಸೇರಿ ಸುಮಾರು 50 ಜನರಿಗೆ 18 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಶನಿವಾರ ನಟಿ ಸಂಜನಾ ಮತ್ತು ವಂಚನೆಗೊಳಗಾದವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಚಿಟ್‌ಫಂಡ್ ಮಾಲಕ ಮಹೇಶ್, ಆತನ ಪತ್ನಿ ನಿರೂಪಾ ಮಹೇಶ್ ವಿರುದ್ಧ ದೂರು ನೀಡಿದ್ದಾರೆ.

ಈ ಸಂಬಂಧ ಸಂಜನಾ ಸಹಕಾರ ಜಂಟಿ ನಿಬಂಧಕರಿಗೂ ದೂರು ನೀಡಿದ್ದು, ಹಣ ವಾಪಾಸ್ಸು ಕೊಡಿಸುವಂತೆ ಸಹಕಾರ ಸಂಘಗಳ ಜಂಟಿ ನಿಬಂಧಕ ಎಚ್. ಬಾಲಶೇಖರ್‌ಗೆ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News