ಅರಳು
Update: 2017-08-20 23:52 IST
ಅಷ್ಟೆತ್ತರದ ಮರದಿಂದ ಒಂದು ಹೂ ಉದುರಿ ಬಿತ್ತು.
ಮಗುವೊಂದು ಓಡೋಡಿ ಬಂದು ಎತ್ತಿಕೊಂಡಿತು. ಮತ್ತು ಅಚ್ಚರಿಯಿಂದ ಹೇಳಿತು ‘‘ಅಮ್ಮಾ...ಅಷ್ಟೆತ್ತರದಿಂದ ಬಿದ್ದರೂ ಹೂವಿಗೆ ಒಂದಿಷ್ಟೂ ಗಾಯವಾಗಿಲ್ಲ’’.
‘‘ಅದು ತನ್ನ ಅಹಂಕಾರದ ಭಾರವನ್ನು ಕಳಚಿ ಹಗುರವಾಗುತ್ತಾ ಉದುರಿ ಬಿತ್ತು. ಅದಕ್ಕೇ ಗಾಯವಾಗಿಲ್ಲ’’ ತಾಯಿ ಹೇಳಿದಳು.
‘‘ಅರ್ಥವಾಗಲಿಲ್ಲ’’ ಮಗು ಹೇಳಿತು.
‘‘ಮಗಳೇ, ಮನುಷ್ಯ ಬೀಳುವುದಿದ್ದರೆ ಎಡವಿ ಬೀಳಬಾರದು, ಎಲ್ಲವನ್ನೂ ಅನುಭವಿಸಿ ಉದುರಿ ಬೀಳಬೇಕು....ಈಗ ಅರ್ಥವಾಯಿತೇ?’’
‘‘ಊಹುಂ ಇಲ್ಲ’’