ಡಂಬುಲಾದಲ್ಲಿ ಭಾರತದ ಗೆಲುವಿನ ಡಮರುಗ

Update: 2017-08-20 18:30 GMT

ಡಂಬುಲಾ, ಆ.20: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ರಂಗಿರಿಯ ಡಂಬುಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಗೆಲುವಿಗೆ 217 ರನ್‌ಗಳ ಸವಾಲನ್ನು ಪಡೆದ ಭಾರತ 28.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 220 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಭಾರತದ ಪರ ಆರಂಭಿಕ ದಾಂಡಿಗ ಶಿಖರ್ ಧವನ್ ಔಟಾಗದೆ 132 ರನ್(90ಎ, 20ಬೌ,3ಸಿ) ಮತ್ತು ನಾಯಕ ವಿರಾಟ್ ಕೊಹ್ಲಿ ಔಟಾಗದೆ 82 ರನ್(70ಎ, 10ಬೌ,1ಸಿ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತ 23 ರನ್ ಗಳಿಸುವ ಹೊತ್ತಿಗೆ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ದಾಂಡಿಗ ರೋಹಿತ್ ಶರ್ಮ 4 ರನ್ ಗಳಿಸಿ ರನೌಟಾದರು.

ಎರಡನೆ ವಿಕೆಟ್‌ಗೆ ಧವನ್ ಮತ್ತು ಕೊಹ್ಲಿ ಮುರಿಯದ ಜೊತೆಯಾಟದಲ್ಲಿ 197 ರನ್‌ಗಳ ಕಾಣಿಕೆ ನೀಡಿದರು.

ಧವನ್ 11ನೆ ಏಕದಿನ ಶತಕ

ಆರಂಭಿಕ ದಾಂಡಿಗ ಶಿಖರ್ ಧವನ್ 11ನೆ ಏಕದಿನ ಶತಕ ದಾಖಲಿಸಿದರು.

87ನೆ ಏಕದಿನ ಪಂದ್ಯದಲ್ಲಿ ಧವನ್ 71 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು. ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

ಶ್ರೀಲಂಕಾ 216ಕ್ಕೆ ಆಲೌಟ್ :

ಇಂದು ಟಾಸ್ ಜಯಿಸಿದ ಭಾರತ ಶ್ರೀಲಂಕಾವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಶ್ರೀಲಂಕಾ 43.2 ಓವರ್‌ಗಳಲ್ಲಿ 216 ರನ್‌ಗಳಿಗೆ ಆಲೌಟಾಗಿತ್ತು. ಭಾರತದ ಅಕ್ಷರ್ ಪಟೇಲ್(34ಕ್ಕೆ3), ಕೇದಾರ್ ಜಾಧವ್(26ಕ್ಕೆ2), ಯಝ್ವೇಂದರ್ ಚಾಹಲ್(60ಕ್ಕೆ2), ಜಸ್‌ಪ್ರೀತ್ ಬುಮ್ರಾ(22ಕ್ಕೆ 2) ದಾಳಿಗೆ ಸಿಲುಕಿದ ಶ್ರೀಲಂಕಾ ತಂಡದ ಪರ ಡಿಕ್ವೆಲ್ಲಾ ಮಾತ್ರ ಅರ್ಧಶತಕ ದಾಖಲಿಸಿದರು.

14 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 74 ರನ್ ಗಳಿಸಿದ್ದ ಶ್ರೀಲಂಕಾದ ಬ್ಯಾಟಿಂಗ್ ಬಳಿಕ ದುರ್ಬಲಗೊಂಡಿತು. ತಂಡದ ಸ್ಕೋರ್ 74ಕ್ಕೆ ತಲುಪಿದಾಗ ಆರಂಭಿಕ ದಾಂಡಿಗ ಡಿಕ್ವೆಲ್ಲಾ ಅವರಿಗೆ ಕೇದಾರ್ ಜಾಧವ್ ಪೆವಿಲಿಯನ್ ಹಾದಿ ತೋರಿಸಿದರು. ಡಿಕ್ವೆಲ್ಲಾ ಔಟಾದ ಬಳಿಕ ಧನುಷ್ಕ ಗುಣತಿಲಕ ಮತ್ತು ಕುಶಾಲ್ ಮೆಂಡಿಸ್ ಎರಡನೆ ವಿಕೆಟ್‌ಗೆ 65 ರನ್‌ಗಳ ಜೊತೆಯಾಟ ನೀಡಿದರು.

169ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ಬಳಿಕ 47 ರನ್ ಗಳಿಸುವ ಹೊತ್ತಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

 ಶ್ರೀಲಂಕಾದ ಆರಂಭಿಕ ದಾಂಡಿಗ ನಿರೋಶನ್ ಡಿಕ್ವೆಲ್ಲಾ(64) ಅರ್ಧಶತಕ ದಾಖಲಿಸಿದರು. ಧನುಶ್ಕ ಗುಣತಿಲಕ(35), ಕುಶಾಲ್ ಮೆಂಡೀಸ್(36), ಉಪುಲ್ ತರಂಗ್(13) ಮತ್ತು ಆ್ಯಂಜೆಲೊ ಮ್ಯಾಥ್ಯೂಸ್(ಔಟಾಗದೆ 36) ಎರಡಂಕಿಯ ಕೊಡುಗೆ ನೀಡಿದರು.

ಸ್ಕೋರ್ ಪಟ್ಟಿ

ಶ್ರೀಲಂಕಾ 43.2 ಓವರ್‌ಗಳಲ್ಲಿ 216 ಆಲೌಟ್

ಡಿಕ್ವೆಲಾ ಎಲ್‌ಬಿಡಬ್ಲು ಬಿ ಕೇದಾರ್ ಜಾಧವ್ 64

ಗುಣತಿಲಕ ಸಿ ರಾಹುಲ್ ಬಿ ಚಾಹಲ್35

ಕುಶಾಲ್ ಮೆಂಡಿಸ್ ಬಿ ಅಕ್ಷರ್ ಪಟೇಲ್36

ತರಂಗ ಸಿ ಧವನ್ ಬಿ ಕೇದಾರ್ ಜಾಧವ್13

ಆ್ಯಂಜೆಲೊ ಮಾಥ್ಯೂಸ್ ನಾಟೌಟ್36

ಚಮರಾ ಕಪುಗೆದಿರಾ ರನೌಟ್(ಕೊಹ್ಲಿ)1

ಹಸರಂಗ ಸಿ ಕೇದಾರ್ ಜಾಧವ್ ಬಿ ಅಕ್ಷರ್2

    ತಿಸಾರ ಪೆರೆರಾ ಬಿ ಬೂಮ್ರಾ0

ಲಕ್ಷಣ್ ಸಂಡಕನ್ ಎಲ್‌ಬಿಡಬ್ಲು ಬಿ ಅಕ್ಷರ್5

ಮಾಲಿಂಗ ಸ್ಟಂ. ಧೋನಿ ಬಿ ಚಾಹಲ್8

  ವಿಶ್ವ ಫೆರ್ನಾಂಡೊ ಬಿ ಬೂಮ್ರಾ0

                           ಇತರೆ16

►ವಿಕೆಟ್ ಪತನ: 1-74, 2-139, 3-150 4-166, 5-169, 6-176, 7-178, 8-187, 9-209, 10-216

►ಬೌಲಿಂಗ್ ವಿವರ

ಭುವನೇಶ್ವರ್ ಕುಮಾರ್6-0-33-0

ಹಾರ್ದಿಕ್ ಪಾಂಡ್ಯ 6-0-35-0

ಜಸ್‌ಪ್ರೀತ್ ಬೂಮ್ರಾ 6.2-0-22-2

ಚಾಹಲ್10-0-60-2

ಕೇದಾರ್ ಜಾಧವ್5-0-26-2

ಅಕ್ಷರ್ ಪಟೇಲ್10-0-34-3

►ಭಾರತ 28.5 ಓವರ್‌ಗಳಲ್ಲಿ 220/1

ರೋಹಿತ್ ರನೌಟ್ 4

ಶಿಖರ್ ಧವನ್ ಔಟಾಗದೆ132

ವಿರಾಟ್ ಕೊಹ್ಲಿ ಔಟಾಗದೆ82

ಇತರೆ02

►ವಿಕೆಟ್ ಪತನ: 1-4

►ಬೌಲಿಂಗ್ ವಿವರ

ಲಸಿಂತ್ ಮಾಲಿಂಗ 8-0-52-0

ವಿಶ್ವ ಫೆರ್ನಾಂಡೊ6-0-43-0

ಆ್ಯಂಜೆಲೊ ಮ್ಯಾಥ್ಯೂಸ್ 2-0-9-0

ತಿಸಾರ ಪೆರೆರಾ2-0-18-0

ಲಕ್ಷಣ್ ಸಂಡಕನ್6-0-63-0

ನಿರೋಷನ್ ಡಿಕ್ವೆಲಾ4.5-0-35-0

ಪಂದ್ಯಶ್ರೇಷ್ಠ : ಶಿಖರ್ ಧವನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News