ಬೋಥಮ್ ದಾಖಲೆ ಮುರಿದ ಬ್ರಾಡ್

Update: 2017-08-20 18:38 GMT

ಬರ್ಮಿಂಗ್‌ಹ್ಯಾಮ್, ಆ.20: ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ತನ್ನ ವೃತ್ತಿ ಜೀವನದ 384ನೆ ಟೆಸ್ಟ್ ವಿಕೆಟ್‌ನ್ನು ಪಡೆದು ಇಂಗ್ಲೆಂಡ್‌ನ ಗ್ರೇಟ್ ಇಯಾನ್ ಬೋಥಮ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ

 ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಗಳಿಸಿದ ಇಂಗ್ಲೆಂಡ್‌ನ 2ನೆ ಬೌಲರ್ ಎನಿಸಿಕೊಂಡಿದ್ದಾರೆ. ಬ್ರಾಡ್ 107 ಟೆಸ್ಟ್‌ಗಳಲ್ಲಿ 384 ಪಡೆದಿದ್ದಾರೆ. ಬೋಥಮ್ 102 ಟೆಸ್ಟ್‌ಗಳಲ್ಲಿ 383 ವಿಕೆಟ್ ಪಡೆದಿದ್ದರು. ಅವರು ಇದೀಗ 3ನೆ ಸ್ಥಾನ ದಲ್ಲಿದ್ದಾರೆ.

ಜೇಮ್ಸ್ ಆ್ಯಂಡರ್ಸನ್ 127 ಪಂದ್ಯಗಳಲ್ಲಿ 492 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಗಳಿಸಿದ ಇಂಗ್ಲೆಂಡ್‌ನ ಬೌಲರ್‌ಗಳ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ಈ ಟೆಸ್ಟ್‌ನಲ್ಲಿ 5 ವಿಕೆಟ್ ಪಡೆದಿದ್ದಾರೆ.

 ಜೀವನಶ್ರೇಷ್ಠ 384ನೆ ವಿಕೆಟ್ ಪಡೆದ ಕ್ಷಣವು ಸ್ಮರಣೀಯವಾಗಿತ್ತು ಎಂದು ಬ್ರಾಡ್ ಹೇಳಿದ್ದಾರೆ.

   ಬ್ರಾಡ್ ಅವರ ಸತತ 2 ಎಸೆತಗಳಲ್ಲಿ ರೋಸ್ಟನ್ ಚೇಸ್ ಮತ್ತು ಜೇಸನ್ ಹೋಲ್ಡರ್ ಔಟಾಗಿದ್ದರು. ಆದರೆ ಹ್ಯಾಟ್ರಿಕ್ ಅವಕಾಶದಿಂದ ವಂಚಿತಗೊಂಡರು.

 2007ರಲ್ಲಿ ಮಾಜಿ ನಾಯಕ ಬೋಥಮ್ ಅವರಿಂದ ಟೆಸ್ಟ್ ಕ್ಯಾಪನ್ನು ಬ್ರಾಡ್ ಧರಿಸಿದ್ದರು.10 ವರ್ಷಗಳ ಬಳಿಕ ಅವರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆಯನ್ನು ಮುರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News