ಕ್ಲಿನಿಕ್‌ನಲ್ಲೇ ಮಹಿಳೆಯ ಮೇಲೆ ವೈದ್ಯನಿಂದ ಅತ್ಯಾಚಾರ

Update: 2017-08-21 04:27 GMT

ಪುಣೆ, ಆ. 21: ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬರ ಮೇಲೆ ಕ್ಲಿನಿಕ್‌ನಲ್ಲೇ ವೈದ್ಯ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ.

ಮುಂಬೈನ ಧಾರಾವಿಯಿಂದ ಚಿಕಿತ್ಸೆಗೆ ಆಗಮಿಸಿದ್ದ ಮಹಿಳೆಯ ಮೇಲೆ ನೌಪಾದಾದಲ್ಲಿ ಬಂಜೆತನ ನಿವಾರಣೆ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಈ ಕೃತ್ಯ ಎಸಗಿದ್ದಾನೆ ಎಂದು ಪಿಎಸ್‌ಐ ಆರ್.ಡಿ.ಶಿಂಧೆ ಹೇಳಿದ್ದಾರೆ.

ತಪಾಸಣೆಯ ನೆಪದಲ್ಲಿ ಕೊಠಡಿಗೆ ಕರೆದೊಯ್ದ ವೈದ್ಯ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಮಹಿಳೆ ಕಿರುಚಿಕೊಳ್ಳಲು ಯತ್ನಿಸಿದಾಗ, ಬಾಯಿಯನ್ನು ಒತ್ತಿಹಿಡಿದು, ಈ ವಿಷಯವನ್ನು ಬಾಯಿ ಬಿಟ್ಟಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಬಳಿಕ ಮಹಿಳೆ ನೌಪಾದಾ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಯ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376, 420 ಹಾಗೂ 506ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News