ಎಐಎಡಿಎಂಕೆಯ ಉಭಯ ಬಣಗಳ ವಿಲೀನ; ಪನ್ನೀರ್ ಸೆಲ್ವಂ ಡಿಸಿಎಂ

Update: 2017-08-21 13:34 GMT

 ಚೆನ್ನೈ, ಆ.21: ತಮಿಳುನಾಡಿನಲ್ಲಿ ಎಐಎಡಿಎಂಕೆಯ ಎರಡು ಬಣಗಳು  ಇಂದು ವಿಲೀನಗೊಂಡಿದ್ದು, ಒ.ಪನ್ನೀರ್ ಸೆಲ್ವಂ ಅವರು ನೂತನ ಉಪಮುಖ್ಯ ಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಚೆನ್ನೈನ ರಾಯ ಪೇಟೆಯ ಪಕ್ಷದ ಕಚೇರಿಯಲ್ಲಿ ಮುಖ್ಯ ಮಂತ್ರಿ ಎ.ಪಳನಿಸ್ವಾಮಿ ಮತ್ತು  ಮಾಜಿ ಮುಖ್ಯ ಮಂತ್ರಿ ಒ.ಪನ್ನೀರ್ ಸೆಲ್ವಂ ನೇತೃತ್ವದ ಬಣಗಳ ನಾಯಕರು  ಪರಸ್ಪರ ಹಸ್ತಲಾಘವ ಮಾಡುವ ಮೂಲಕ ವಿಲೀನಕ್ಕೆ ಒಪ್ಪಿಗೆ  ನೀಡಿದರು.

ಈ ಸಂದರ್ಭದಲ್ಲಿ ನಡೆದ ಮಾತುಕತೆಯಂತೆ ಪನ್ನೀರ್ ಸೆಲ್ವಂ ಅವರನ್ನು ನೂತನ ಉಪಮುಖ್ಯ ಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಎಐಎಡಿಎಂಕೆಯ ನಾಯಕರು ಸಂಜೆ 4:30ಕ್ಕೆ  ಈ ಸಂಬಂಧ ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ್  ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.ಬಳಿಕ ನೂತನ   ಉಪಮುಖ್ಯ ಮಂತ್ರಿ ಒ.ಪನ್ನೀರ್ ಸೆಲ್ವಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News