×
Ad

ಒರಿಸ್ಸಾ ಕೋಮುಗಲಭೆ ಕುರಿತ ಸಾಕ್ಷ ಚಿತ್ರ ಪ್ರದರ್ಶನ

Update: 2017-08-21 23:26 IST

ಬೆಂಗಳೂರು, ಆ.21: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಪೆಡಸ್ಟ್ರಿಯನ್ ಪಿಕ್ಚರ್ಸ್ ವತಿಯಿಂದ ಒರಿಸ್ಸಾ ರಾಜ್ಯದ ಕಂದಮಾಲ್ನಲ್ಲಿ ನಡೆದ ಕೋಮುಗಲಭೆ ಕುರಿತ ಸಾಕ್ಷಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಮಂಗಳವಾರ(ಆ.22) ಸಂಜೆ 4:30 ಸುಮಾರಿಗೆ ನಗರದ ಬೆನ್ಸನ್‌ಟೌನ್‌ನಲ್ಲಿರುವ ಇಂಡಿಯನ್ ಸೋಷಿಯಲ್ ಇನ್ಸ್‌ಟಿಟ್ಯೂಟ್‌ನಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಈ ಚಿತ್ರವನ್ನು ಕೆ.ಪಿ.ಶಶಿ ಅವರು ನಿರ್ದೇಶನ ಮಾಡಿದ್ದಾರೆ.

ಚಿತ್ರಪ್ರದರ್ಶನದ ಬಳಿಕ ಚರ್ಚೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 99646 76400ನ್ನು ಸಂಪರ್ಕಿಸಬಹುದೆಂದು ಕೋಮು ಸೌಹಾರ್ದ ವೇದಿಕೆ ಸಂಚಾಲಕ ತ್ರಿಮೂರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News