×
Ad

ಬ್ಲುವೇಲ್ ಚಾಲೆಂಜ್ ಕುರಿತು ಅರಿವು ಮೂಡಿಸಲು ತನ್ವೀರ್ ಸೇಠ್ ಸೂಚನೆ

Update: 2017-08-21 23:26 IST

ಬೆಂಗಳೂರು ಆ.21: ಬ್ಲೂವೇಲ್ ಚಾಲೆಂಜ್ ಎಂಬ ಆನ್‌ಲೈನ್ ಗೇಮ್ ಕುರಿತು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಇಲಾಖೆಯು ಈ ಕೂಡಲೇ ತ್ವರಿತಗತಿಯಲ್ಲಿ ಎಲ್ಲಾ ಉಪ ನಿರ್ದೇಶಕರುಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ. ಸೈಬರ್ ಕೆಫೆ ಮತ್ತು ಅಂತರ್ಜಾಲ ತಾಣಗಳಿಂದ ಈ ರೀತಿಯ ಅನಾರೋಗ್ಯಕರ ಚಟುವಟಿಕೆಗಳಿಂದ ದೂರ ಇರುವಂತೆ ಮಕ್ಕಳಿಗೆ ತಿಳುವಳಿಕೆ ನೀಡುವುದು ಹಾಗೂ ಈ ಬಗ್ಗೆ ಪೋಷಕರುಗಳಲ್ಲಿ ಅರಿವು ಮೂಡಿಸಲು ಆಂದೋಲನವನ್ನು ರೂಪಿಸಲು ಸೂಚನೆ ನೀಡಿದ್ದಾರೆ.

ಮಕ್ಕಳಿಗೆ ಅರಿವು ಮತ್ತು ಜಾಗೃತಿ ಮೂಡಿಸಲು ಹಾಗೂ ಅಂತರ್ಜಾಲ ತಾಣಗಳಲ್ಲಿ ಈ ರೀತಿಯ ಅನಾರೋಗ್ಯಕರ ಆಟಗಳಿಂದ ದೂರವಿರುವಂತೆ ಮತ್ತು ವೆಬ್‌ಸೈಟ್‌ಗಳನ್ನು ಬಳಕೆ ಮಾಡದಂತೆ ಮುಗ್ಧ ಶಾಲಾ ಮಕ್ಕಳಿಗೆ ತಿಳಿಸುವುದು ಉಪ ನಿರ್ದೇಶಕರುಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರುಗಳು, ಶಿಕ್ಷಕರುಗಳು ಮತ್ತು ಪೋಷಕರ ಜವಾಬ್ದಾರಿ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News