×
Ad

ಹಳೇ ನೋಟು ಬದಲಾವಣೆ ದಂಧೆ: 1 ಕೋಟಿ ರೂ.ಹಳೇ ನೋಟು ವಶಕ್ಕೆ

Update: 2017-08-21 23:28 IST

  ಬೆಂಗಳೂರು, ಆ.21: ಅಮಾನ್ಯಗೊಂಡಿರುವ ಗರಿಷ್ಠ ಮುಖಬೆಲೆಯ 500 ಮತ್ತು 1 ಸಾವಿರ ರೂ. ನೋಟು ಬದಲಾವಣೆ ದಂಧೆ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಿ 1 ಕೋಟಿ ರೂ.ವಶಕ್ಕೆ ಪಡೆಯುವಲ್ಲಿ ಇಲ್ಲಿನ ಸುಬ್ರಮಣ್ಯ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಬಾಣಸವಾಡಿ ನಿವಾಸಿ ಪ್ರಭಾಕರನ್(40) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಗಾಯಿತ್ರಿನಗರದ 1ನೆ ಮುಖ್ಯರಸ್ತೆ ಬಳಿ ಆರೋಪಿ ಕೇಂದ್ರ ಸರಕಾರ ನಿಷೇಧಿಸಿರುವ 500 ಮತ್ತು 1 ಸಾವಿರ ರೂ. ಮುಖ ಬೆಲೆ ಹಳೇೆ ನೋಟುಗಳ ಬದಲಾವಣೆ ಮಾಡಿಕೊಳ್ಳಲು ಮುಂದಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿ ಪ್ರಭಾಕರನ್ ಬಳಿಯಿಂದ 1 ಕೋಟಿ ರೂ.ವೌಲ್ಯದ ಹಳೇ ನೋಟುಗಳನ್ನು ವಶಕ್ಕೆ ಪಡೆದು ಇಲ್ಲಿನ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News