ಮನೆಗಳಿಗೆ ನುಗ್ಗಿ ಕಳವು ಪ್ರಕರಣ: ಬಂಧನ

Update: 2017-08-21 18:00 GMT

ಬೆಂಗಳೂರು, ಆ.21: ಮಡಿವಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆಗಳ ಬಾಗಿಲಿನ ಬೀಗಗಳನ್ನು ಮುರಿದು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದ ಪ್ರಕರಣ ಸಂಬಂಧ ನಾಲ್ವರು ಅಂತಾರಾಜ್ಯ ಕಳ್ಳರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುವಲ್ಲಾಂಗಡ್ ಶಂಕರ್‌ರಾಮ್(21), ಅಸ್ಗರ್(21), ಸುಹೇಲ್(22), ಆಂದ್ರಪ್ರದೇಶ ಮದನಪಲ್ಲಿ ಮೂಲದ ಹರೀಶ(32), ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್, ಬಂಧಿತರಿಂದ 20 ಲಕ್ಷ ರೂ. ಬೆಲೆ ಬಾಳುವ 620 ಗ್ರಾಂ ತೂಕದ ಚಿನ್ನಾಭರಣ ಮತ್ತು 4 ಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಆರೋಪಿಗಳ ಬಂಧಿನದಿಂದ ನಾಲ್ಕು ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ

ಮತ್ತಿಬ್ಬರ ಬಂಧನ: ಕಳ್ಳತನ ಪ್ರಕರಣ ಸಂಬಂಧ ಇಲ್ಲಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಆನೇಕಲ್ ಮೂಲದ ಶ್ರೀನಿವಾಸ್(28) ದೊಡ್ಡನಾಗಮಂಗಲದ ಮಧು(21) ಎಂಬುವರನ್ನು ಬಂಧಿಸಿ 30 ಲಕ್ಷ ಮೌಲ್ಯದ ಎರಡು ಕಾರು ಮತ್ತು 592 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News