ಪತ್ರ

Update: 2017-08-21 18:32 GMT
Editor : -ಮಗು

ಗುಜರಿ ಅಂಗಡಿಯಾತನಿಗೆ ಒಂದು ಇನ್‌ಲೆಂಡ್ ಲೆಟರ್ ಸಿಕ್ಕಿತು.
ವಿಳಾಸವೇನೋ ಬರೆದಿತ್ತು. ಆದರೆ ಇನ್ನೂ ಪೋಸ್ಟ್ ಮಾಡಿರಲಿಲ್ಲ.
ಸುಮಾರು ಹತ್ತು ವರ್ಷ ಹಿಂದಿನದು.
ತೆರೆದು ಓದಿದ. ಅದೊಂದು ಪ್ರೇಮಪತ್ರವಾಗಿತ್ತು. ಒಬ್ಬ ಹುಡುಗಿ, ಹುಡುಗನಿಗೆ ಬರೆದ ಪತ್ರ.
ಆದರೆ ಆತನಿಗೆ ತಲುಪಿಸುವುದಕ್ಕೆ ಅವಳಿಗೆ ಸಾಧ್ಯವಾಗಿರಲಿಲ್ಲ.
ಗುಜರಿಯಂಗಡಿಯಾತನಿಗೆ ಏನನಿಸಿತೋ, ಆ ಪತ್ರವನ್ನು ಹತ್ತಿರದಲ್ಲಿರುವ ಅಂಚೆ ಡಬ್ಬಕ್ಕೆ ಹಾಕಿ ಬಂದ.
ಅರ್ಧಕ್ಕೆ ನಿಂತಿದ್ದ ಕತೆ ಮತ್ತೆ ಚಲನೆ ಪಡೆಯಿತು.

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !