ನಡಾಲ್ ನಂ.1 ಸ್ಥಾನಕ್ಕೆ ಲಗ್ಗೆ

Update: 2017-08-21 18:35 GMT

ಪ್ಯಾರಿಸ್, ಆ.21: ಸ್ಪೇನ್‌ನ ರಫೆಲ್ ನಡಾಲ್ ಅವರು ಮೂರು ವರ್ಷಗಳ ಬಳಿಕ ಪುರುಷರ ವಿಶ್ವ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. 2008ರಿಂದ ಈ ತನಕ ಒಟ್ಟು ನಾಲ್ಕನೇ ಬಾರಿಗೆ ನಂ.1 ಸ್ಥಾನಕ್ಕೇರಿದ್ದಾರೆ. 31ರ ಹರೆಯದ ನಡಾಲ್ ಅವರು ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ನಡೆದ ಫ್ರೆಂಚ್ ಓಪನ್ ಫೈನಲ್‌ನ ಪುರುಷರ ಸಿಂಗಲ್ಸ್ ನಲ್ಲಿ ಟ್ರೋಫಿ ಎತ್ತಿಕೊಂಡಿದ್ದರು. ಇದರೊಂದಿಗೆ ನಡಾಲ್ 15ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ನಡಾಲ್ ಕಳೆದ ವಾರ ಸಿನ್ಸಿನಾಟಿ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ವಿರುದ್ಧ ಸೋತು ಕೂಟದಿಂದ ಹೊರನಡೆದಿದ್ದರು. ನಡಾಲ್ ಈ ಹಿಂದೆ 141 ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದರು.

ಎಟಿಪಿ ರ‍್ಯಾಂಕಿಂಗ್‌ ಟಾಪ್ 10

1. ರಫೆಲ್ ನಡಾಲ್( ಸ್ಪೇನ್), 2.ಆ್ಯಂಡಿ ಮರ್ರೆ(ಗ್ರೇಟ್ ಬ್ರಿಟನ್), 3.ರೋಜರ್ ಫೆಡರರ್(ಸ್ವಿಸ್), 4.ಸ್ಟಾನ್ ವಾವ್ರಿಂಕ(ಸ್ವಿಸ್), 5.ನೊವಾಕ್ ಜೊಕೊವಿಕ್(ಸರ್ಬಿಯ), 6.ಅಲೆಕ್ಸಾಂಡರ್ ಝ್ವೆರೆೆವ್(ಜರ್ಮನಿ), 7.ಮರಿನ್ ಸಿಲಿಕ್(ಕ್ರೊವೇಶಿಯಾ), 8.ಡೊಮಿನಿಕ್ ಥೀಮ್ (ಆಸ್ಟ್ರೀಯ), 9.ಗ್ರಿಗೊರ್ ಡಿಮಿಟ್ರೋವ್(ಬಲ್ಗೇರಿಯ), 10. ಕೀ ನಿಶಿಕೋರಿ(ಜಪಾನ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News