ಕೆರೆಯ ಸುತ್ತಲೂ ಇರುವ ಕಂಬಿಗಳ ಎತ್ತರವನ್ನು ಹೆಚ್ಚಿಸಿ

Update: 2017-08-21 18:36 GMT

ಮಾನ್ಯರೆ,

ಬೆಂಗಳೂರಿನ ಸದಾಶಿವನಗರದಲ್ಲಿರುವ ಸ್ಯಾಂಕಿ ಕೆರೆಯ ಸುತ್ತಲೂ ಬಿಬಿಎಂಪಿ ವತಿಯಿಂದ ಈಗ ಹಾಕಿರುವ ಕಬ್ಬಿಣದ ಕಂಬಿಗಳು ಕೇವಲ ಕೆಲವೇ ಕೆಲವು ಅಡಿಗಳ ಎತ್ತರದಲ್ಲಿದೆ. ಪ್ರತಿ ದಿನ ಸಾವಿರಾರು ಜನರು ಇಲ್ಲಿ ವಾಯು ವಿಹಾರಕ್ಕೆ ಮತ್ತು ಪುಟ್ಟ ಮಕ್ಕಳು ಆಟವಾಡಲು ಬರುವುದರಿಂದ ಎತ್ತರವಿಲ್ಲದ ಕೆರೆಯ ಸುತ್ತಲಿನ ಈ ಕಂಬಿಗಳು ಅಪಾಯವನ್ನುಂಟು ಮಾಡುತ್ತವೆ. ಆದುದರಿಂದ ಬಿಬಿಎಂಪಿಯವರು ಕೂಡಲೇ ಕೆರೆಯ ಸುತ್ತಲೂ ಕನಿಷ್ಠ 4 ಅಡಿಗಳ ಎತ್ತರಕ್ಕೆ ಕಂಬಿಯನ್ನು ಎತ್ತರಿಸಿ ಮುಂದೆ ಆಗಬಹುದಾದಂತಹ ಅನಾಹುತಗಳಿಗೆ ತಡೆಹಿಡಿಯಬೇಕಾಗಿದೆ

Similar News