ಪಾಸ್ ಪೋರ್ಟ್ ಅರ್ಜಿದಾರರ ಪೊಲೀಸ್ ಪರಿಶೀಲನೆ ಇನ್ನು ಮುಂದೆ ಆನ್ ಲೈನ್

Update: 2017-08-22 07:49 GMT

ಹೊಸದಿಲ್ಲಿ,ಆ.22 :  ಪಾಸ್ ಪೋರ್ಟ್ ಗಳನ್ನು ನೀಡುವ ಪ್ರಕ್ರಿಯೆಯಲ್ಲಿ ಪೊಲೀಸ್ ಪರಿಶೀಲನೆಗೆ ತಗಲುವ ಸಮಯದಿಂದಾಗುತ್ತಿರುವ ವಿಳಂಬಕ್ಕೆ ಅಂತ್ಯ ಹಾಡಲು ಸರಕಾರವು ಪೊಲೀಸ್ ಪರಿಶೀಲನಾ ವ್ಯವಸ್ಥೆಯನ್ನು ಆನ್ ಲೈನ್ ಮೂಲಕ ನಡೆಸಲಾಗುವುದು. ಇದಕ್ಕಾಗಿ  ಅಪರಾಧಿಗಳ ಅಪರಾಧಕ್ಕೆ ಸಂಬಂಧಿಸಿದಂತೆ  ಹೊಸದಾಗಿ ರಚಿಸಲಾಗಿರುವ ನ್ಯಾಷನಲ್ ಡಾಟಾ ಬೇಸ್ ಇದರ ಲಿಂಕ್ ಒಂದನ್ನು ಉಪಯೋಗಿಸಿ ಅರ್ಜಿದಾರರ ಹಿನ್ನೆಲೆಯನ್ನು ಪರಿಶೀಲಿಸಲಾಗುವುದು. ಗೃಹ ಸಚಿವಾಲಯದ ಕ್ರೈಮ್ ಎಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಎಂಡ್ ಸಿಸ್ಟಮ್ಸ್ ಅನ್ನು ಸೋಮವಾರ ಬಿಡುಗಡೆಗೊಳಿಸಲಾಗಿತ್ತು.

ಈ ಯೋಜನೆಯನ್ನು 2009ರಂದು ಅನುಮೋದಿಸಲಾಗಿದ್ದರೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಡಿಜಿಟಲ್ ಪೊಲೀಸ್ ಪೋರ್ಟಲ್ ಜಾರಿಗೊಳಿಸುವ ಮೂಲಕ ಅದನ್ನು ಆರಂಭಿಸಿದ್ದರು. ಈ ಪೋರ್ಟಲ್  ದೇಶದ 15,398 ಪೊಲೀಸ್ ಠಾಣೆಗಳನ್ನು ಆನ್ ಲೈನ್ ಮೂಲಕ ಒಗ್ಗೂಡಿಸಿದೆಯಲ್ಲದೆ  ನಾಗರಿಕರಿಗೆ ಅಪರಾಧ  ಘಟನೆಗಳ ಬಗ್ಗೆ ಆನ್ ಲೈನ್ ಮೂಲಕ ದಾಖಲಿಸಲೂ ಅನುವು ಮಾಡಿಕೊಡುವುದು. ಮುಂದಿನ ದಿನಗಳಲ್ಲಿ ಈ ಪೋರ್ಟಲ್ ಅನ್ನು  ಇ-ಕೋರ್ಟುಗಳು ಹಾಗೂ ಇ-ಪ್ರಿಸನ್ ಸಾಫ್ಟ್ ವೇರ್ ಜತೆ ಏಕೀಕರಣಗೊಳಿಸಲಾಗುವುದು.

ಈ ಡಿಜಿಟಲ್ ಪೊಲೀಸ್ ಪೋರ್ಟಲ್  ಲಿಂಕ್ ಮೂಲಕ ಪಾಸ್ ಪೋರ್ಟ್ ಅರ್ಜಿದಾರರ ಪೊಲೀಸ್ ಪರಿಶೀಲನೆಗೆ ಸಹಕಾರಿಯಾಗುವುದು. ಪೊಲೀಸರು ಅರ್ಜಿದಾರನ ನಿವಾಸದ ನೆರೆಹೊರೆಯ ಪ್ರದೇಶಕ್ಕೆ  ಭೇಟಿ ನೀಡಬೇಕಾದ ಸಂದರ್ಭ ಬಂದರೂ ಅಭಿಪ್ರಾಯಗಳನ್ನು ಮೊಬೈಲ್/ಟ್ಯಾಬ್ಲೆಟ್ ಗಳ ಮೂಲಕ ದಾಖಲಿಸಿ ಅದನ್ನು ಮುಂದೆ ಪಾಸ್ ಪೋರ್ಟ್ ಕಚೇರಿಗೆ ರವಾನಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News