ಮಾಲೆಗಾಂವ್ ತೀರ್ಪು ಅಚ್ಚರಿ ಸೃಷ್ಟಿಸಿದೆ: ಸೀತಾರಾಂ ಯೆಚೂರಿ

Update: 2017-08-22 09:00 GMT

ಹೊಸದಿಲ್ಲಿ, ಆ. 22: ಮಾಲೆಗಾಂವ್  ಪ್ರಕರಣದಲ್ಲಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್‍ರಿಗೆ ಜಾಮೀನು ನೀಡಿದ ಕೋರ್ಟು ತೀರ್ಪು ವಿಚಿತ್ರ ಮತ್ತುಆಶ್ಚರ್ಯಕಾರಿಯಾಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ. ಜಾಮೀನು ಲಭಿಸಲು ಇರುವ ಕಾರಣಗಳ ಕುರಿತು ಎನ್‍ಐಎ ವಿವರಣೆ ನೀಡಬೇಕೆಂದು ಅವರು ತಿಳಿಸಿದ್ದಾರೆ. ಎನ್‍ಐಎ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ ಎಂದು ಯೆಚೂರಿ ಹೇಳಿದ್ದಾರೆ.

 ಎನ್‍ಐಎ ಮುಖ್ಯಸ್ಥರ ಕಾಲಾವಧಿ ವಿಸ್ತರಿಸಿರುವುದರಲ್ಲಿ ಗೂಢಾಲೋಚನೆ ನಡೆದಿದೆ ಎಂದ ಅವರು  ಇದು ವಿಸ್ತರಣೆ ನಡೆಸುವ  ಒಂದುಸರಕಾರವಾಗಿದೆ ಎಂದು ಆರೋಪಿಸಿದ್ದಾರೆ.

 ಪುರೋಹಿತ್‍ಗೆ ಜಾಮೀನು ಲಭಿಸಿದ್ದು ಆತ ಆರೋಪಿಯಲ್ಲ ಮತ್ತು ನಿಷ್ಕಳಂಕ ವ್ಯಕ್ತಿ  ಎನ್ನುವುದಕ್ಕೆ ಪುರಾವೆಯಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜಿತ್‍ವಾಲ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News