ಉಗ್ರರ ದಾಳಿಯಿಂದ ಮಡಿದವರಿಗಾಗಿ ಸ್ಪರ್ಧೆಯನ್ನು ತ್ಯಾಗ ಮಾಡಿದ ಸ್ಪೇನ್ ಈಜುಗಾರ

Update: 2017-08-22 18:56 GMT

ಬಾರ್ಸಿಲೋನಾ, ಆ.22: ಸ್ಪೇನ್‌ನ ಈಜುಗಾರ ಫೆರ್ನಾಂಡೊ ಅಲ್ವಾರೆಝ್ ಅವರು ಬಾರ್ಸಿಲೋನಾದಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯಲ್ಲಿ ಮಡಿದವರ ಆತ್ಮಕ್ಕೆ ಚಿರಶಾಂತಿ ಕೋರಿ ವೌನ ಪ್ರಾರ್ಥನೆ ಸಲ್ಲಿಸಿದ ಕಾರಣದಿಂದಾಗಿ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡ ಘಟನೆ ವರದಿಯಾಗಿದೆ.

 ಅಲ್ವಾರೆಝ್ ಸಂಘಟಕರಿಗೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದರು. ಮತ್ತು ತನಗೆ ಒಂದು ನಿಮಿಷ ವೌನಕ್ಕೆ ಅವಕಾಶ ನೀಡುವಂತೆ ಅವರು ವಿನಂತಿಸಿದ್ದರು. ಆದೆರ ಅವರು ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ ಎಂದು ತಿಳಿದು ಬಂದಿದೆ.

ಅಲ್ವಾರೆಝ್ ಅವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ಅವರ ಈ ನಿರ್ಧಾರದಿಂದಾಗಿ ಸಹಸ್ರಾರು ಜನರ ಮನ ಗೆದ್ದಿದ್ದಾರೆ.

ಬಾರ್ಸಿಲೋನಾನ ಲಾಸ್ ರ್ಯಾಬ್ಲಾಸ್ ನಗರದಲ್ಲಿ ಕಳೆದ ಬುಧವಾರ ಪಾದಚಾರಿಗಳ ಮೇಲೆ ಉಗ್ರನೊಬ್ಬ ವ್ಯಾನ್ ನುಗ್ಗಿಸಿದ ಪರಿಣಾಮವಾಗಿ 14 ಮಂದಿ ಸಾವಿಗೀಡಾಗಿದ್ದರು.130ಕ್ಕೆ ಅಧಿಕ ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News