ಬೆಂಗಳೂರು: ಗಣೇಶ ವಿಸರ್ಜನೆಗೆ ವಾಹನ ವ್ಯವಸ್ಥೆ

Update: 2017-08-23 17:44 GMT

ಬೆಂಗಳೂರು, ಆ. 23: ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಶುಕ್ರವಾರ ನಗರದ ವಿವಿಧ ಸ್ಥಳಗಳಲ್ಲಿ ಗಣೇಶ ವಿಸರ್ಜನೆ ವಾಹನಗಳ ವ್ಯವಸ್ಥೆ ಮತ್ತು ಸಮಯ ನಿಗದಿ ಮಾಡಿದೆ.

ಬಿ.ಡಿ.ಎ ರಂಗಮಂದಿರ ಆರ್.ಆರ್ ನಗರ(ಸಂಜೆ 6 ರಿಂದ ರಾತ್ರಿ 7:45 ರವರೆಗೆ), ನಿಮಿಶಾಂಭ ದೇವಸ್ಥಾನ(ಸಂಜೆ 8 ರಿಂದ 10 ರವರೆಗೆ), ಜಯನಗರ ನಾಲ್ಕನೇ ಬ್ಲಾಕ್ ಪೋಲಿಸ್ ಠಾಣೆ ವ್ಯಾಪ್ತಿ(ಸಂಜೆ 5-6:45 ರವರೆಗೆ), ಹನುಮಂತನಗರ ಪೋಲಿಸ್ ಠಾಣೆ ವ್ಯಾಪ್ತಿ(ಸಂಜೆ 7:15 ರಿಂದ ರಾತ್ರಿ 10 ರವರೆಗೆ), ಜೀವನ್ ಭೀಮಾನಗರ ಪೋಲಿಸ್ ಠಾಣೆ ವ್ಯಾಪ್ತಿ(ಸಂಜೆ 4 ರಿಂದ 7:45 ರವರೆಗೆ), ಹಲಸೂರು ಪೋಲಿಸ್ ಠಾಣೆ ವ್ಯಾಪ್ತಿ(ಸಂಜೆ 8 ರಿಂದ ರಾತ್ರಿ 10 ರವರೆಗೆ).

ಯಲಹಂಕ ಹೊಸ ಟೌನ್ ನಾಲ್ಕನೇ ಹಂತ ಶಿವ ದೇವಸ್ಥಾನದ ಹತ್ತಿರ(ಸಂಜೆ 5:30 ಯಿಂದ ರಾತ್ರಿ 6 ರವರೆಗೆ), ಎನ್‌ಇಎಸ್ ಕಚೇರಿ ಹತ್ತಿರ ಪೂರ್ವಪ್ರಜ್ಞಾ ಪ್ರೌಢಶಾಲೆ ಮುಂಭಾಗ ದೊಡ್ಡಬಳ್ಳಾಪುರ ರಸ್ತೆ(ಸಂಜೆ 6 ರಿಂದ 6:45 ರವರೆಗೆ), ಯಲಹಂಕ ಹಳೇ ಟೌನ್ ಬಸ್ ನಿಲ್ದಾಣ ಬಳಿ(ಸಂಜೆ 7 ರಿಂದ ರಾತ್ರಿ 7:45 ರವರೆಗೆ), ಸಹಕಾರ ನಗರ ಗಣೇಶ ದೇವಸ್ಥಾನ(ಸಂಜೆ 8 ರಿಂದ 10 ರವರೆಗೆ), ದಾಸರಹಳ್ಳಿ(ಬಿ.ಬಿ.ಎಂ.ಪಿ ಕಚೇರಿ ಎದುರು) (ಸಂಜೆ 4:30 ಯಿಂದ ರಾತ್ರಿ 5:30 ರವರೆಗೆ), ನೆಲಗದರನ ಹಳ್ಳಿ ವೃತ್ತ(ಸಂಜೆ 5:45 ರಿಂದ ರಾತ್ರಿ 6:30 ರವರೆಗೆ), ಮರೋಹಳ್ಳಿ ವಿಲೇಜ್(ಬಿ.ಬಿ.ಎಂ.ಪಿ ಕಚೇರಿ) (ಸಂಜೆ 6:45 ರಿಂದ ರಾತ್ರಿ 7 ರವರೆಗೆ).

ಬಿಎಸ್ಸೆನ್ನೆಲ್ ಲೇಔಟ್ ಒಂದನೇ ಹಂತ ವಾಟರ್ ಟ್ಯಾಂಕ್ ಹತ್ತಿರ(ಸಂಜೆ 7:15 ರಿಂದ 8 ರವರೆಗೆ), ಸುಂಕದಕಟ್ಟೆ(ಸಿಂಡಿಕೇಟ್ ಬ್ಯಾಂಕ್ ಹತ್ತಿರ) (ಸಂಜೆ 8:15 ರಿಂದ 9 ರವರೆಗೆ), ಹೆಗ್ಗನಹಳ್ಳಿ ಕ್ರಾಸ್(ಸರಕಾರಿ ಶಾಲೆ ಎದುರು) (ಸಂಜೆ 9:15 ರಿಂದ 12 ರವರೆಗೆ), ಮಹದೇವಪುರ ಪೋಲಿಸ್ ಸ್ಟೇಷನ್ ಹತ್ತಿರ(ಸಂಜೆ 5:45 ರಿಂದ ರಾತ್ರಿ 6 ರವರೆಗೆ), ಎಚ್‌ಎಎಲ್ ಏರ್‌ಪೋರ್ಟ್ ರಸ್ತೆ(ಸಂಜೆ 6:45 ರಿಂದ ರಾತ್ರಿ 7:30 ರವರೆಗೆ), ಮಾರತ್ ಹಳ್ಳಿ ಬ್ರಿಡ್ಜ್(ಸಂಜೆ 7:45 ರಿಂದ 8:30 ರವರೆಗೆ), ಎಇಸಿಎಸ್ ಲೇಔಟ್ ಕುಂದಲಹಳ್ಳಿ(ಸಂಜೆ 8:45 ರಿಂ 10:30 ರವರೆಗೆ).

ಗಣಪತಿ ನಗರ ಪೀಣ್ಯ(ಸಂಜೆ4 ರಿಂದ 6:15 ರವರೆಗೆ), ಪೀಣ್ಯ ಎರಡನೇ ಹಂತ ಬಸ್ ಸ್ಟಾಪ್ ಬಳಿ(ಸಂಜೆ 6:30 ಯಿಂದ 7:30 ರವರೆಗೆ), ಲಗ್ಗೆರೆ ಪಾರ್ಕ್ ಬಳಿ(7:45 ರಿಂದ 8:30 ರವರೆಗೆ), ಕೆಐಎಡಿಬಿ ಕ್ವಾರ್ಟಸ್ ಪೀಣ್ಯ(ಸಂಜೆ 8:45 ರಿಂದ 10 ರವರೆಗೆ), ಮಾರ್ಡನ್ ಸ್ಟ್ರೀಟ್ ಅಂಗಡಿ ಎದುರು ಪವಿತ್ರ ಪ್ಯಾರಡೈಸ್ ಬಸವೇಶ್ವರನಗರ(ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ), ವಿಜಯನಗರ ಬಸ್ ಸ್ಟಾಂಡ್ ಎದುರು(ಸಂಜೆ 5:30 ಯಿಂದ 7 ರವರೆಗೆ), ಮಾಗಡಿ ರೋಡ್ ಬಸ್ ಸ್ಟಾಂಡ್ ಹತ್ತಿರ ಶನಿಮಹಾತ್ಮ ದೇವಸ್ತಾನ ಎದುರು(ಸಂಜೆ 7:30 ಯಿಂದ 8:30 ರವರೆಗೆ).

ಮಂಜುನಾಥನಗರ ಒಂದನೇ ಕ್ರಾಸ್ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಎದುರು(ರಾತ್ರಿ 7:30 ಯಿಂದ 8:30 ರವರೆಗೆ), ಮಲ್ಲೇಶ್ವರ ಪೋಲಿಸ್ ಸ್ಟೇಷನ್ ಹತ್ತಿರದ ಮೈದಾನದ ಎದುರು(ಮಧ್ಯಾಹ್ನ 3 ರಿಂದ ಸಂಜೆ 5:30 ರವರೆಗೆ), ಹದಿನೆಂಟನೇ ಕ್ರಾಸ್ ಬಸ್ ಸ್ಟಾಂಡ್ ಹತ್ತಿರದ ಮಿಲ್ಕ್‌ಬಾರ್ ಮುಂಭಾಗ ಮಲ್ಲೇಶ್ವರಂ(ಸಂಜೆ 6 ರಿಂದ ರಾತ್ರಿ 7:30 ರವರೆಗೆ), ಬ್ರೀಗೆಡ್ ಅಪಾರ್ಟ್‌ಮೆಂಟ್ ಮುಂಭಾಗ ಮಲ್ಲೇಶ್ವರಂ(ರಾತ್ರಿ 8 ರಿಂದ 9:15 ರವರೆಗೆ), ಯಶವಂತಪುರ ಪೋಲಿಸ್ ಸ್ಟೇಷನ್ ಮುಂಭಾಗ(ರಾತ್ರಿ 9:30 ಯಿಂದ 10:30 ರವರೆಗೆ)ದಲ್ಲಿರುವ ಗಣೇಶಗಳ ವಿಸರ್ಜನೆಗೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News