ಕತರ್: ಗೃಹೋದ್ಯೋಗಿಗಳಿಗೆ ಇನ್ನು ಕೆಲಸದ ಭದ್ರತೆ

Update: 2017-08-24 09:34 GMT

ದೋಹಾ, ಆ.24: ಗೃಹೋದ್ಯೋಗಿಗಳಿಗೆ ದಿನವೊಂದಕ್ಕೆ ಗರಿಷ್ಠ 10 ಗಂಟೆ ಕೆಲಸ ನಿಗದಿಪಡಿಸುವ ಕಾನೂನನ್ನು ಕತರ್ ಸರಕಾರ ಅನುಮೋದಿಸಿದೆ. ದೇಶದಲ್ಲಿರುವ ಸಾವಿರಾರು ಮನೆಗೆಲಸದವರು, ಆಯಾಗಳು ಹಾಗೂ ಅಡುಗೆಯಾಳುಗಳಿಗೆ ಈ ಕಾನೂನು ವರದಾನವಾಗಲಿದೆ.

ಈ ಹೊಸ ಡೊಮೆಸ್ಟಿಕ್ ಎಂಪ್ಲಾಯ್ಮೆಂಟ್ ಲಾ ಪ್ರಕಾರ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಪ್ರತೀ ತಿಂಗಳ ಅಂತ್ಯಕ್ಕೆ ವೇತನ ಒದಗಿಸುವುದು ಹಾಗೂ ವಾರಕ್ಕೆ ಕನಿಷ್ಠ ಒಂದು ದಿನ ರಜೆ ನೀಡುವುದು ಕಡ್ಡಾಯವಾಗಿದೆ. ವಾರ್ಷಿಕವಾಗಿ ಅವರಿಗೆ ಕನಿಷ್ಠ ಮೂರು ವಾರಗಳ ರಜೆಯನ್ನೂ ನೀಡುವುದು ಈ ಕಾನೂನಿನಂತೆ ಕಡ್ಡಾಯವಾಗಿದೆ.

ಅವರ ಸೇವೆಯ ಅಂತ್ಯಕ್ಕೆ ಅವರಿಗೆ ಸವಲತ್ತಾಗಿ ಮೂರು ವಾರಗಳ ಅವಧಿಯ ಹೆಚ್ಚುವರಿ ವೇತನವು ಪ್ರತೀ ವರ್ಷದ ಅಂತ್ಯಕ್ಕೆ ಅವರ ಗುತ್ತಿಗೆಯ ಅವಧಿ ಮುಕ್ತಾಯವಾಗುವ ಸಮಯ ನೀಡಬೇಕಿದೆ.

ವಿದೇಶಗಳಿಂದ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 18 ವರ್ಷಕ್ಕಿಂತ ಕೆಳಗಿನವರನ್ನು ನೇಮಿಸುವುದು ನಿಷೇಧಿಸಲಾಗಿದೆ.
ಈ ಹೊಸ ಶಾಸನವನ್ನು ಕತರಿನ ಅಮೀರ್ ಶೇಖ್ ತಮಿಮ್ ಬಿನ್ ಹಮದ್ ಅಲ್ ಥನಿ ಮಂಗಳವಾರ ಜಾರಿಗೆ ತಂದಿದ್ದಾರೆ. ಇಲ್ಲಿಯ ತನಕ ಈ ದೇಶದಲ್ಲಿ ಗೃಹೋದ್ಯೋಗಿಗಳಿಗೆ ಯಾವುದೇ ಭದ್ರತೆಯಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News