ಬೆಂಗಳೂರು-ಕೆಮ್ಮಣ್ಣಗುಂಡಿ ಮಾರ್ಗದಲ್ಲಿ ವೇಗದೂತ ಸಾರಿಗೆ ಸಂಚಾರ
Update: 2017-08-24 20:23 IST
ಬೆಂಗಳೂರು, ಆ.24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಬೆಂಗಳೂರು-ಕೆಮ್ಮಣ್ಣುಗುಂಡಿ ಮಾರ್ಗದಲ್ಲಿ ಆ.28 ರಿಂದ ವೇಗದೂತ ಸಾರಿಗೆ ಸಂಚಾರ ಮಾಡಲಿದೆ.
ಬೆಂಗಳೂರಿನಿಂದ ಬೆಳಗ್ಗೆ 6ಕ್ಕೆ ಹೊರಟು, ಮಧ್ಯಾಹ್ನ 12.15 ಕ್ಕೆ ಕೆಮ್ಮಣ್ಣಗುಂಡಿಗೆ ತಲುಪುತ್ತದೆ. ಬಳಿಕ ಮಧ್ಯಾಹ್ನ 3.45 ಕ್ಕೆ ಕೆಮ್ಮಣ್ಣಗುಂಡಿಯಿಂದ ಹೊರಟು ರಾತ್ರಿ 10ಕ್ಕೆ ಬೆಂಗಳೂರಿಗೆ ವಾಪಸಾಗುತ್ತದೆ. ಪ್ರಯಾಣ ದರ ನಿಗದಿ ಪಡಿಸಲಾಗಿದೆ.
ಮುಂಗಡ ಟಿಕೇಟ್ ಕಾಯ್ದಿರಿಸಲು 30 ದಿನಗಳವರೆಗಿನ ಸೌಲಭ್ಯ ಕಲ್ಪಿಸಲಾಗಿದೆ.
ಹೆಚ್ಚಿನ ಮಾತಿಗಾಗಿ 080-49596666 ಸಂಪರ್ಕಿಸಬಹುದಾಗಿದೆ. ಇ-ಟಿಕೇಟ್‌ಗಾಗಿ www.ksrtc.in ಗೆ ಸಂಪರ್ಕಿಸಬಹುದಾಗಿದೆ.