‘ವೈದ್ಯಕೀಯ ಕೋರ್ಸು’ ಆಫ್‌ಲೈನ್ ಸೀಟು ಹಂಚಿಕೆ

Update: 2017-08-25 11:22 GMT

 ಬೆಂಗಳೂರು, ಆ.25: ಸರಕಾರದ ನಿರ್ದೇಶನದಂತೆ ಎರಡನೆ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿದಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಆಫ್‌ಲೈನ್ ಸೀಟು ಹಂಚಿಕೆ (MOP-UP ROUND) ಯನ್ನು ಆ.26, 27 ಹಾಗೂ 28ರಂದು ನಡೆಸಲಾಗುವುದು. ವಿವರವಾದ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್  http://kea.kar.nic.in ನಲ್ಲಿ ಪ್ರಕಟಿಸಲಾಗಿದೆ.

ಎರಡನೆ ಸುತ್ತಿನ ಸೀಟು ಹಂಚಿಕೆಯ ನಂತರ ವಿವಿಧ ಪ್ರವರ್ಗಗಳಲ್ಲಿ ಉಳಿದಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್ ನಲ್ಲಿ http://kea.kar.nic.in  ಪ್ರಕಟಿಸಲಾಗಿದೆ.
ಆಫ್‌ಲೈನ್ ಸೀಟು ಹಂಚಿಕೆ (MOP-UP ROUND)  ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೊದಲು ಸೀಟುಗಳ ಲಭ್ಯತೆಯನ್ನು ನೋಡಿ ಭಾಗವಹಿಸಬಹುದಾಗಿದೆ. ಎರಡನೆ ಸುತ್ತಿನ ಸೀಟು ಹಂಚಿಕೆಯ ನಂತರ ಯಾವುದಾದರೂ ಸೀಟುಗಳು ರದ್ದುಗೊಂಡರೆ ಅಂತಹ ರದ್ದುಗೊಳ್ಳುವ ಸೀಟುಗಳನ್ನು ಆಯಾ ಪ್ರವರ್ಗದಲ್ಲಿಯೆ ಹಂಚಿಕೆಗೆ ಪರಿಗಣಿಸಲಾಗುವುದು.

ನೀಟ್-2017ಕ್ಕೆ ಹಾಜರಾಗಿ ಅರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಮತ್ತು ಇಲ್ಲಿಯವರೆಗೆ ಅಖಿಲ ಭಾರತ ಮಟ್ಟದಲ್ಲಿ, ಡಿಜಿಎಚ್‌ಎಸ್ ಅಥವಾ ಯಾವುದೇ ಸಂಸ್ಥೆ, ಬೋರ್ಡುಗಳಿಂದ ಯಾವುದೇ ಸೀಟುಗಳಿಗೆ ಪ್ರವೇಶ ಪಡೆದಿದ್ದಲ್ಲಿ ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗುವುದಿಲ್ಲ.
ಕೆಇಎ ಮುಖಾಂತರ ದಂತವೈದ್ಯಕೀಯ ಸೀಟು ಹಂಚಿಕೆಯಾದವರು ವೈದ್ಯಕೀಯ ಸೀಟು ಹಂಚಿಕೆಗಾಗಿ ಮಾತ್ರ ಭಾಗವಹಿಸಬಹುದು. ಆದರೆ, ಈ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರಾಗುವುದಿಲ್ಲ. ಮುಂದುವರಿದು ವೈದ್ಯಕೀಯ ಸೀಟನ್ನು ಹಂಚಿಕೆ ಪಡೆದವರು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗುವುದಿಲ್ಲ.

ಎರಡನೆ ಸುತ್ತಿನ ಸೀಟು ಹಂಚಿಕೆಯ ನಂತರ ವಿವಿಧ ಪ್ರವರ್ಗಗಳಲ್ಲಿ ಉಳಿದಿರುವ ಸೀಟುಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಕಾಲೇಜುವಾರು ವಿವರಗಳನ್ನು ವೆಬ್‌ಸೈಟ್  http://kea.kar.nic.in  ನಲ್ಲಿ ಪ್ರಕಟಿಸಲಾಗಿದೆ.

ಪ್ರವರ್ಗಗಳು: ಅಲ್ಪಸಂಖ್ಯಾತ(ತಮಿಳು)-ವೈದ್ಯಕೀಯ 64, ದಂತ ವೈದ್ಯಕೀಯ 35, ಅಲ್ಪಸಂಖ್ಯಾತ(ತೆಲುಗು)-ವೈದ್ಯಕೀಯ 75, ದಂತ ವೈದ್ಯಕೀಯ 131, ಅಲ್ಪಸಂಖ್ಯಾತ(ತೆಲುಗು-ಎಚ್‌ಕೆ)-ವೈದ್ಯಕೀಯ 47, ದಂತ ವೈದ್ಯಕೀಯ 36, ಅಲ್ಪಸಂಖ್ಯಾತ(ಕೊಡವ)-ವೈದ್ಯಕೀಯ 46, ದಂತ ವೈದ್ಯಕೀಯ 14, ಅಲ್ಪಸಂಖ್ಯಾತ(ಮುಸ್ಲಿಮ್-ಎಚ್‌ಕೆ)-ದಂತ ವೈದ್ಯಕೀಯ 30, ಅಲ್ಪಸಂಖ್ಯಾತ(ತುಳು)-ವೈದ್ಯಕೀಯ 11, ದಂತ ವೈದ್ಯಕೀಯ 98, ಅನಿವಾಸಿ ಭಾರತೀಯ-ವೈದ್ಯಕೀಯ 514, ದಂತ ವೈದ್ಯಕೀಯ 339 ಸೀಟುಗಳಿವೆ.

 ಆ.25ರವರೆಗೆ ಮತ್ತೆ ಯಾವುದೇ ಸೀಟು ರದ್ದಾದರೆ ಸೀಟುಗಳ ವಿವರಗಳನ್ನು ವೆಬ್‌ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗುವುದು. ರದ್ದಾದ ಸೀಟುಗಳು ಯಾವ ವರ್ಗಕ್ಕೆ ಸೇರಿರುತ್ತದೆಯೊ ಅದೇ ವರ್ಗಕ್ಕೆ ನೀಡಿ ನಂತರ ಮಾಡಲಾಗುವುದು ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News