ದಲಿತರಿಗೆ ಆತಿಥ್ಯ ಅನುಕರಣೀಯ: ಸುರೇಶ್‌ಕುಮಾರ್
Update: 2017-08-26 20:47 IST
ಬೆಂಗಳೂರು, ಆ.26: ದಲಿತರಿಗೆ ಆತಿಥ್ಯ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯ ಅನುಕರಣೀಯ ಎಂದು ರಾಜ್ಯ ಬಿಜೆಪಿ ವಕ್ತಾರ ಎಸ್. ಸುರೇಶ್‌ಕುಮಾರ್ ಹೇಳಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ 33 ದಲಿತ ಕುಟುಂಬಗಳ ಸದಸ್ಯರಿಗೆ ನಗರದ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಯಡಿಯೂರಪ್ಪ ಆ.28ರಂದು ಆತಿಥ್ಯ ನೀಡಲಿದ್ದಾರೆ. ಶತಮಾನಗಳಿಂದ ಶೋಷಣೆ,ನಿರ್ಲಕ್ಷ್ಯಗಳಿಗೆ ತುತ್ತಾಗಿದ್ದ ದಲಿತ ಬಂಧುಗಳನ್ನು ಸಮಾನತೆಯ ವೇದಿಕೆಗೆ ಕರೆತರುತ್ತೀರುವ ನಡೆ ಅಭಿನಂದನೀಯ ಎಂದು ಶ್ಲಾಘಿಸಿದ್ದಾರೆ.
ಮತ್ತೊಮ್ಮೆ ಸಾರ್ವಜನಿಕ ಬಾಂಧವ್ಯ ಬದ್ಧತೆ ಮೆರೆದಿರುವ ಯಡಿಯೂರಪ್ಪನವರು ದಲಿತರೆಡೆಗೆ ಬಿಜೆಪಿ ನಡಿಗೆ ಘೋಷಣೆಗೆ ಹೊಸ ಭಾಷ್ಯ ಬರೆದಿದ್ದಾರೆ. ದಲಿತರೆಡೆಗಿನ ತಮ್ಮ ಪ್ರಾಮಾಣಿಕ ಬದ್ಧತೆ ರಾಜಕೀಯಕ್ಕಿಂತಲೂ ಮಿಗಿಲಾದದ್ದು ಎನ್ನುವುದನ್ನು ಈ ಆದರ್ಶ ನಡೆಯಿಂದ ಸಾಬೀತುಪಡಿಸಿದ್ದಾರೆ ಎಂದು ಪ್ರಕಟನೆಯಲ್ಲಿ ಹೇಳಿದ್ದಾರೆ.